alex Certify ಚಿರುಗೆ ಡ್ರಗ್ಸ್ ನಂಟಿನ ಆರೋಪ: ಇಂದ್ರಜಿತ್ ಲಂಕೇಶ್ ವಿರುದ್ಧ ತೀವ್ರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರುಗೆ ಡ್ರಗ್ಸ್ ನಂಟಿನ ಆರೋಪ: ಇಂದ್ರಜಿತ್ ಲಂಕೇಶ್ ವಿರುದ್ಧ ತೀವ್ರ ಆಕ್ರೋಶ

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟು ಕುರಿತಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ ಚಿರಂಜೀವಿ ಸರ್ಜಾ ಅವರ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇಂದ್ರಜಿತ್ ಲಂಕೇಶ್ ವಿರುದ್ಧ ನಿರ್ಮಾಪಕ ಎನ್.ಎಂ. ಸುರೇಶ್ ವಾಗ್ದಾಳಿ ನಡೆಸಿದ್ದು ಸುಮ್ಮನೆ ಬೇರೆಯವರ ಬಗ್ಗೆ ಚರ್ಚೆ ಮಾಡಬಾರದು. ದಿ. ಚಿರಂಜೀವಿ ಸರ್ಜಾ ಅವರ ಹೆಸರು ಪ್ರಸ್ತಾಪಿಸಿದ್ದು ತಪ್ಪು. ಮೊದಲೇ ಚಿರಂಜೀವಿ ಸರ್ಜಾ ಕುಟುಂಬ ನೋವಿನಲ್ಲಿ ಇದೆ ಎಂದು ಹೇಳಿದ್ದಾರೆ.

ಫಿಲಂ ಚೇಂಬರ್ ಕಾರ್ಯದರ್ಶಿಯೂ ಆಗಿರುವ ನಿರ್ಮಾಪಕ ಎನ್.ಎಂ. ಸುರೇಶ್, ಚಿತ್ರರಂಗವೆಂದರೆ ಒಬ್ಬರು ಇಬ್ಬರಿಗೆ ಸಂಬಂಧಿಸಿದ್ದಲ್ಲ. ಇದರಲ್ಲಿ ಅಪಾರ ಸಂಖ್ಯೆಯ ಜನ ತೊಡಗಿಕೊಂಡಿದ್ದಾರೆ. ಹೇಳಿಕೆ ಕೊಡುವ ಸಂದರ್ಭದಲ್ಲಿ ಅವರು ಚಿರಂಜೀವಿ ಕುಟುಂಬದ ಹೆಸರನ್ನು ಪ್ರಸ್ತಾಪಿಸಿದ್ದು ಸರಿಯಲ್ಲವೆಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...