alex Certify ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮನಾ ಕಿತ್ತೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮನಾ ಕಿತ್ತೂರು

ಸ್ಯಾಂಡಲ್ವುಡ್ ನಿರ್ದೇಶಕಿ ಸುಮನಾ ಕಿತ್ತೂರು ಕಳೆದ ತಿಂಗಳು ಸರಳವಾಗಿ ಮದುವೆಯಾಗಿದ್ದಾರೆ. ಶಿವಮೊಗ್ಗ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದಾರೆ.

ಏಪ್ರಿಲ್ 17 ರಂದು  ಪುದುಚೇರಿಯಲ್ಲಿರುವ ವರನ ಮನೆಯಲ್ಲಿ ಮದುವೆ ನಡೆದಿದೆ. ಎರಡೂ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದೆವು ಎಂದು ಸುಮನಾ ಕಿತ್ತೂರು ಹೇಳಿದ್ದಾರೆ.

ಏಪ್ರಿಲ್ 31 ಕ್ಕೆ ಲಾಕ್ಡೌನ್ ತೆರವಾಗುತ್ತದೆ. ಕರ್ನಾಟಕದಲ್ಲಿ ಮಂತ್ರ ಮಾಂಗಲ್ಯ ಮದುವೆ ಆಗಬೇಕು ಎಂದುಕೊಂಡಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಪುದುಚೇರಿಯಲ್ಲಿ ಮದುವೆ ನಡೆದಿದೆ ಎಂದು ಹೇಳಿದ್ದಾರೆ.

ಕೆಲಸದ ನಿಮಿತ್ತ ಸುಮನಾ ಕಿತ್ತೂರು ಪುದುಚೇರಿಯಲ್ಲಿದ್ದು, ಶಿವಮೊಗ್ಗ ಮೂಲದ ಶ್ರೀನಿವಾಸ್ ಕುಟುಂಬ ಕೂಡ ಪುದುಚೇರಿಯಲ್ಲಿ ಇದೆ. ಸುಮನಾ ಕಿತ್ತೂರು ಮತ್ತು ಶ್ರೀನಿವಾಸ್ ದಂಪತಿ ಮುಂದೆ ಕರ್ನಾಟಕದಲ್ಲಿ ನೆಲೆಸಲಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...