alex Certify ಮಾನನಷ್ಟ ಮೊಕದ್ದಮೆ: ಕೊನೆಗೂ ರಿಚಾ ಚಡ್ಡಾ ಬಳಿ ಕ್ಷಮೆ ಯಾಚಿಸಿದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನನಷ್ಟ ಮೊಕದ್ದಮೆ: ಕೊನೆಗೂ ರಿಚಾ ಚಡ್ಡಾ ಬಳಿ ಕ್ಷಮೆ ಯಾಚಿಸಿದ ನಟಿ

ಫಿಲಂ ಮೇಕರ್​ ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡುವ ವೇಳೆ ನಟಿ ರಿಚಾ ಚಡ್ಡಾ ಹೆಸರು ಬಳಸಿಕೊಂಡಿದ್ದರಿಂದ ಗರಂ ಆಗಿದ್ದ ನಟಿ ಮಾನನಷ್ಟ ಮೊಕದ್ದಮೆ ಹೂಡಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಇದೀಗ ಪ್ರಕರಣ ಸಂಬಂಧ ರಿಚಾ ಚಡ್ಡಾ ಬಳಿ ನಟಿ ಪಾಯಲ್​ ಘೋಷ್​ ಕ್ಷಮೆ ಯಾಚಿಸಿದ್ದಾರೆ.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾ. ಎ. ಕೆ. ಮೆನನ್ ನೇತೃತ್ವದ ದೆಹಲಿ ಹೈಕೋರ್ಟ್ ಏಕ ಸದಸ್ಯ ಪೀಠ ಪಾಯಲ್​ ಘೋಶ್​ ಕ್ಷಮೆಯನ್ನ ಸ್ವೀಕರಿಸಿದೆ. ಈ ಮೂಲಕ ರಿಚಾ ಚಡ್ಡಾಗೆ ದೆಹಲಿ ಹೈಕೋರ್ಟ್​ನಲ್ಲಿ ಜಯ ಸಿಕ್ಕಂತಾಗಿದೆ.

ಕೆಲ ದಿನಗಳ ಹಿಂದಷ್ಟೇ ಅನುರಾಗ್​ ಕಶ್ಯಪ್​ ವಿರುದ್ಧ ಮಿಟೂ ಆರೋಪ ಹೊರಿಸಿದ್ದ ನಟಿ ಪಾಯಲ್​ ಘೋಶ್​​ ರಿಚಾ ಚಡ್ಡಾ ಅವರ ಹೆಸರನ್ನ ಬಳಕೆ ಮಾಡಿಕೊಂಡಿದ್ದರು. ಇದರಿಂದ ಕೆರಳಿದ್ದ ರಿಚಾ ಮಿಸ್​ ಘೋಶ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿಂದೆ ಕ್ಷಮೆ ಕೇಳಲು ನಿರಾಕರಿಸಿದ್ದ ಪಾಯಲ್​ ಘೋಶ್​ ಇದೀಗ ರಿಚಾ ಬಗೆಗಿನ ತಮ್ಮ ಎಲ್ಲ ಹೇಳಿಕೆಗಳನ್ನ ವಾಪಸ್​ ಪಡೆದು ಬೇಷರತ್​ ಕ್ಷಮೆ ಯಾಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...