alex Certify ಗುಳಿಕೆನ್ನೆ ಬೆಡಗಿಗೆ NCB ಸಮನ್ಸ್; ಬಾಲಿವುಡ್ ಹೈ ಪ್ರೊಫೈಲ್ ನಟಿಯರಿಗೂ ನಶೆಯ ನಂಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಳಿಕೆನ್ನೆ ಬೆಡಗಿಗೆ NCB ಸಮನ್ಸ್; ಬಾಲಿವುಡ್ ಹೈ ಪ್ರೊಫೈಲ್ ನಟಿಯರಿಗೂ ನಶೆಯ ನಂಟು

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಆಲಿಖಾನ್ ಹಾಗೂ ರಕುಲ್ ಪ್ರೀತ್ ಸಿಂಗ್ ಅವರಿಗೆ ಎನ್.ಸಿ.ಬಿ.( ಮಾದಕ ದ್ರವ್ಯ ನಿಯಂತ್ರಣ ಪ್ರಾಧಿಕಾರ) ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಡ್ರಗ್ಸ್ ಖರೀದಿಗಾಗಿ ಟ್ಯಾಲೆಂಟ್ ಮ್ಯಾನೇಜ್ ಮೆಂಟ್ ಏಜನ್ಸಿ ಮ್ಯಾನೇಜರ್ ಕರಿಷ್ಮಾ ಎಂಬುವವರ ಜೊತೆ ವಾಟ್ಸಾಪ್ ಸಂಭಾಷಣೆ ನಡೆಸಿದ್ದರು ಎನ್ನಲಾದ ಸ್ಕ್ರೀನ್ ಶಾಟ್ ಒಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಸುದ್ದಿಮಾಡಿತ್ತು. ಇದೇ ವಿಚಾರವಾಗಿ ಎನ್.ಸಿ.ಬಿ. ದೀಪಿಕಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ ಎನ್ನಲಾಗಿದೆ.

ಇನ್ನು ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೀಡಾಗಿರುವ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಎನ್.ಸಿ.ಬಿ. ವಿಚಾರಣೆ ವೇಳೆ ನಟಿ ಸಾರಾ ಆಲಿಖಾನ್, ರಕುಲ್ ಪ್ರೀತ್ ಸಿಂಗ್ ಹಾಗೂ ಶ್ರದ್ಧಾ ಕಪೂರ್ ಕೂಡ ಡ್ರಗ್ಸ್ ಸೇವಿಸುತ್ತಿರುವುದಾಗಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಈ ನಿಟ್ಟಿನಲ್ಲಿ ವಿಚಾರಣೆ ನಡೆಸುವ ಸಲುವಾಗಿ ಎನ್.ಸಿ.ಬಿ. ಕಾರ್ಯೋನ್ಮುಖವಾಗಿದ್ದು, ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...