alex Certify ಸಾಮಾಜಿಕ ಮಾಧ್ಯಮದ ಪೋಸ್ಟ್ ಡಿಲೀಟ್​ ಮಾಡಿ ಅಚ್ಚರಿ ಮೂಡಿಸಿದ ದೀಪಿಕಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಮಾಧ್ಯಮದ ಪೋಸ್ಟ್ ಡಿಲೀಟ್​ ಮಾಡಿ ಅಚ್ಚರಿ ಮೂಡಿಸಿದ ದೀಪಿಕಾ..!

ಹೊಸ ವರ್ಷದ ಪ್ರಯುಕ್ತ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದ್ದಾರೆ. ಸದ್ಯ ತಮ್ಮ ಪತಿ ರಣವೀರ್​ ಸಿಂಗ್​ ಜೊತೆ ರಾಜಸ್ಥಾನದ ಜೈಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ನಟಿ ತೆಗೆದುಕೊಂಡಿರುವ ಈ ಕ್ರಮ ಎಲ್ಲರನ್ನ ಆಶ್ಚರ್ಯಗೊಳಿಸಿದೆ.

2021ಕ್ಕೆ ಕಾಲಿಟ್ಟ ಪ್ರಯುಕ್ತ ದೀಪಿಕಾ ಇನ್ಸ್​ಟಾಗ್ರಾಂ, ಟ್ವಿಟರ್​, ಫೇಸ್​ಬುಕ್​ ಸೇರಿದಂತೆ ಸಾಮಾಜಿಕ ಮಾಧ್ಯಮದ ಎಲ್ಲಾ ಖಾತೆಗಳಲ್ಲಿ ತಾವು ಮಾಡಿದ್ದ ಪೋಸ್ಟ್​ಗಳನ್ನ ಡಿಲೀಟ್​ ಮಾಡಿದ್ದಾರೆ. ಅಭಿಮಾನಿಗಳಿಗಾಗಿ ಆಡಿಯೋ ಡೈರಿಯೊಂದನ್ನ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ತಮ್ಮ ಪ್ರೊಫೈಲ್​ ಫೋಟೋಗಳನ್ನ ನಟಿ ಬದಲಾಯಿಸಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಪೋಸ್ಟ್​ಗಳನ್ನ ಸ್ವತಃ ದೀಪಿಕಾ ಪಡುಕೋಣೆ ಡಿಲೀಟ್​ ಮಾಡಿದ್ದಾರಾ ಇಲ್ಲವೇ ಹ್ಯಾಕರ್ಸ್​ ಕಾಟವಾ ಎಂಬುದು ಇನ್ನೂ ದೃಢವಾಗಿಲ್ಲ. ಅಥವಾ ತಮ್ಮ ಮುಂಬರುವ ಸಿನಿಮಾದ ಪಬ್ಲಿಸಿಟಿಗಾಗಿ ಈ ರೀತಿ ಮಾಡಿದ್ದಾರಾ ಎಂಬ ಪ್ರಶ್ನೆಯೂ ಮೂಡಿದೆ.

View this post on Instagram

A post shared by Deepika Padukone (@deepikapadukone)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...