alex Certify ಖ್ಯಾತ ನಟಿಯ ಜೀವ ತೆಗೆದ ಬ್ರೈನ್ ಟ್ಯೂಮರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟಿಯ ಜೀವ ತೆಗೆದ ಬ್ರೈನ್ ಟ್ಯೂಮರ್

ತಿರುವನಂತಪುರಂ: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಶರಣ್ಯ ಶಶಿ ಮೃತಪಟ್ಟಿದ್ದಾರೆ.

2012 ರಲ್ಲಿ ಬ್ರೈನ್ ಟ್ಯೂಮರ್ ಪತ್ತೆಯಾಗಿದ್ದು, 11 ಮೇಜರ್ ಸರ್ಜರಿಗೆ ಒಳಗಾಗಿದ್ದರು. ಮೇ 23 ರಂದು ಅವರಿಗೆ ಕೊರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಚಿಕಿತ್ಸೆಗಾಗಿ ಹಣಕಾಸು ಕೊರತೆ ಉಂಟಾದ ಸಂದರ್ಭದಲ್ಲಿ ಸಿನಿರಂಗದ ಕಲಾವಿದರಿಂದ ಅವರು ನೆರವು ಪಡೆದುಕೊಂಡಿದ್ದರು. ನಿಯಮಿತವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮತ್ತೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಲಯಾಳಂ, ತಮಿಳು ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶರಣ್ಯ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮಿಳು ಚಿತ್ರ ‘ಪಚೈ’ನಲ್ಲಿ ಶರಣ್ಯ ಶಶಿ ಪಾತ್ರ ನಿರ್ವಹಿಸಿದ್ದಾರೆ. ಮೋಹನ್ ಲಾಲ್ ಅವರ ‘ಚೋಟಾ ಮುಂಬೈ’, ‘ತಾಳಪ್ಪವು’, ‘ಬಾಂಬೆ ಮಾರ್ಚ್ 12’, ‘ಮರಿಯಾ ಕಲಿಪ್ಪಿನಾಲು’ ಸೇರಿದಂತೆ ಅನೇಕ ಮಲಯಾಳಂ ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...