alex Certify ಟ್ರೋಲಿಗರ ಚಳಿ ಬಿಡಿಸಿದ ಟ್ವಿಂಕಲ್​ ಖನ್ನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರೋಲಿಗರ ಚಳಿ ಬಿಡಿಸಿದ ಟ್ವಿಂಕಲ್​ ಖನ್ನಾ…!

ಹೆಸರಿನ ಮೂಲಕವೇ ವಿವಾದ ಸೃಷ್ಟಿಸಿದೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಸಿನಿಮಾ ಲಕ್ಷ್ಮೀ ಬಾಂಬ್​. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡುತ್ತಿರುವ ಈ ಚಿತ್ರದ ಹೆಸರನ್ನ ಬದಲಾವಣೆ ಮಾಡಬೇಕು ಅಂತಾ ಅನೇಕರು ಚಿತ್ರತಂಡದ ಮೇಲೆ ಒತ್ತಡ ಹೇರ್ತಾನೆ ಇದ್ದಾರೆ.

ವಿವಾದಗಳ ನಡುವೆಯೂ ಚಿತ್ರತಂಡ ಇಂದು (ಸೋಮವಾರ ) ಸಂಜೆ 7.30ಕ್ಕೆ ಡಿಸ್ನಿ + ಹಾಟ್​ಸ್ಟಾರ್​ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ಧವಾಗಿದೆ. ಆದರೆ ಇತ್ತ ಅಕ್ಷಯ್​ ಕುಮಾರ್​ ಪತ್ನಿ ನಟಿ ಹಾಗೂ ಲೇಖಕಿ ಟ್ವಿಂಕಲ್​ ಖನ್ನಾ ಕೂಡ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ಲಕ್ಷ್ಮೀ ಬಾಂಬ್​ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ನೀಲಿ ಬಣ್ಣದ ಮುಖದ ಮೇಲೆ ಕೆಂಪು ಬಣ್ಣದ ಕುಂಕುಮವಿಟ್ಟು ತೃತೀಯ ಲಿಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ತಾರೆ. ಅದೇ ರೀತಿ ಟ್ವಿಂಕಲ್​ ಫೋಟೋವನ್ನೂ ಎಡಿಟ್​ ಮಾಡಿದ ಟ್ರೋಲಿಗರು ಟ್ವಿಂಕಲ್ ಬಾಂಬ್​ ಎಂದು ಕ್ಯಾಪ್ಶನ್​ ಕೊಟ್ಟು ಸೋಶಿಯಲ್​ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ.

ಟ್ರೋಲಿಗರ ಈ ಹುಚ್ಚಾಟ ಕಂಡು ಗರಂ ಆದ ಟ್ವಿಂಕಲ್​, ಈ ಫೋಟೋವನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಯಾರೋ ಒಬ್ಬ ವ್ಯಕ್ತಿ ನನಗೆ ಈ ಫೋಟೋವನ್ನ ಟ್ಯಾಗ್​ ಮಾಡುವ ಮೂಲಕ ಥರ್ಡ್ ಕ್ಲಾಸ್​​ ಮಹಿಳೆ ಎಂದು ಹೇಳಿದ್ದಾನೆ. ನೀವು ದೇವರಿಗೆ ತಮಾಷೆ ಮಾಡ್ತಿಯಾ ಎಂದು ಬರೆದುಕೊಂಡಿದ್ದಾನೆ. ದೇವರು ಒಳ್ಳೆ ರೀತಿಯ ತಮಾಷೆಗಳನ್ನ ಇಷ್ಟಪಡ್ತಾನೆ. ಇಲ್ಲದಿದ್ರೆ ಆ ದೇವರು ನಿಮ್ಮನ್ನ ಭೂಮಿಗೆ ಕಳಿಸ್ತಾನೇ ಇರಲಿಲ್ಲ ಅಂತಾ ಟಾಂಗ್​ ನೀಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...