alex Certify ʼಕೊರೊನಾʼದಿಂದಾದ ನಷ್ಟ ತುಂಬಲು ಪಾಪ್​ಕಾರ್ನ್​ ಮಾರಾಟಕ್ಕೆ ಮುಂದಾದ ಥಿಯೇಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದಾದ ನಷ್ಟ ತುಂಬಲು ಪಾಪ್​ಕಾರ್ನ್​ ಮಾರಾಟಕ್ಕೆ ಮುಂದಾದ ಥಿಯೇಟರ್

ಕೊರೊನಾ ವೈರಸ್​​ನಿಂದಾಗಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಸಿನಿಮಾ ಮಂದಿರವನ್ನ ಬಂದ್​ ಮಾಡಿದ್ದವು. ಸಿನಿಮಾ ನೋಡೋಕೆ ಜನರೇ ಇಲ್ಲ ಅಂದಮೇಲೆ ಮಲ್ಟಿಫ್ಲೆಕ್ಸ್​ಗಳಲ್ಲಿ ಮಾರಾಟಕ್ಕಿರುವ ಪಾಪ್​ಕಾರ್ನ್​ಗಳನ್ನ ಖರೀದಿ ಮಾಡೋರು ಯಾರು ಅಲ್ವಾ..?

ಆದರೆ ಇಂತಹ ಒಂದು ಸಮಸ್ಯೆಗೆ ಪರಿಹಾರ ಹುಡುಕಿರುವ ಬೆಲ್ಜಿಯಂ ಸಿನಿಮಾ ಗ್ರೂಪ್​​ ಮೂವಿ ಟಿಕೆಟ್​ ಇಲ್ಲದೆಯೂ ಪಾಪ್​ ಕಾರ್ನ್ ಮಾರಾಟ ಮಾಡೋಕೆ ಮುಂದಾಗಿದೆ. ಇದರಿಂದ ಆದರೂ ಕೊಂಚ ಹಣ ಗಳಿಸುವ ಪ್ಲಾನ್​ ಹೊಂದಿದೆ.

ಯುರೋಪ್​ನಲ್ಲಿ 100ಕ್ಕೂ ಹೆಚ್ಚು ಥಿಯೇಟರ್​ಗಳನ್ನ ಹೊಂದಿರುವ ಕಿನೆಪೊಲಿಸ್​, 13 ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ 68 ಪ್ರತಿಶತ ನಷ್ಟ ಕಂಡಿರೋದಾಗಿ ಹೇಳಿಕೊಂಡಿದೆ.

ಬೆರಗಾಗಿಸುತ್ತೆ‌ 81 ವರ್ಷದ ವೃದ್ದೆ ಫಿಟ್‌ ನೆಸ್‌ ಗೋಲ್

ಇನ್ನು ಈ ವಿಚಾರವಾಗಿ ಮಾತನಾಡಿದ ಸಿನಿ ಮಂದಿರದ ಸಿಇಓ ಎಡ್ಡಿ ಡುಕ್ವೇನ್, ಈ ನಷ್ಟವನ್ನ ತುಂಬಲು ಸಾಕಷ್ಟು ಹೊಸ ಮಾರ್ಗಗಳನ್ನ ಹುಡುಕುತ್ತಿದ್ದೇವೆ. ಇದರ ಒಂದು ಹಂತವಾಗಿ ಊಬರ್​ ಈಟ್ಸ್​ ಮೂಲಕ ಪಾಪ್​ ಕಾರ್ನ್​ ಡೆಲಿವರಿ ಆರಂಭಿಸಿದ್ದೇವೆ ಎಂದು ಹೇಳಿದ್ರು.

ಕೆನಡಾದ ಗ್ರಾಹಕರೊಬ್ಬರು ಮೂವಿ ಟಿಕೆಟ್​ ಇಲ್ಲದವರಿಗೆ ಪಾಪ್​ ಕಾರ್ನ್​ ನೀಡುತ್ತೀರಾ ಎಂದು ಕೇಳಿದ ಬಳಿಕ ಈ ಪ್ಲಾನ್​ ಹೊಳೆದಿದೆಯಂತೆ. ಆಕೆ ಮೂವಿ ಟಿಕೆಟ್​ ಇಲ್ಲದೆಯೇ ಪಾಪ್​ ಕಾರ್ನ್ ಖರೀದಿ ಮಾಡಲು ಬಯಸಿದ್ದಾಳೆ ಅಂದಮೇಲೆ ನಾವೇಕೆ ಹೋಮ್​ ಡೆಲಿವರಿ ಮಾಡಬಾರದು ಎಂದು ನಿರ್ಧರಿಸಿದ್ವಿ ಅಂತಾ ಎಡ್ಡಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...