alex Certify ಗಾಯಕನ ದನಿಗೆ ಹೆಜ್ಜೆ ಹಾಕಿದ ಹಿರಿಯ ಜೀವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯಕನ ದನಿಗೆ ಹೆಜ್ಜೆ ಹಾಕಿದ ಹಿರಿಯ ಜೀವ

ಜೇಸನ್ ಅಲನ್ ಎಂಬ ಬ್ರಿಟಿಷ್ ಸಂಗೀತಗಾರರೊಬ್ಬರು ಪೋಸ್ಟ್ ಮಾಡಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ಲೆಜೆಂಡರಿ ಗಾಯಕ ಎಲ್ವಿಸ್ ಪ್ರೆಸ್ಲೆ ಹಾಡಿರುವ ‘Can’t Help Falling in Love’ ಹಾಡಿಗೆ ಸ್ಟೆಪ್ ಹಾಕುತ್ತಾ, ದಾರಿಹೋಕರಿಗೆ ಮನರಂಜನೆ ಕೊಡುತ್ತಿರುವ ತಮ್ಮ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಅಲನ್.

ಈ ವೇಳೆ ಅನಿರೀಕ್ಷಿತ ಅತಿಥಿಯೊಬ್ಬರು ಅಲನ್‌ನನ್ನು ಕೂಡಿಕೊಂಡಿದ್ದಾರೆ. ದಾಫ್ನೇ ಹೆಸರಿನ ವೃದ್ಧೆಯೊಬ್ಬರು ಸೀನ್‌ಗೆ ಎಂಟ್ರಿ ಕೊಟ್ಟು, ಅವರೂ ಸಹ ಬಹಳ ಉತ್ಸಾಹದಿಂದ ಕುಣಿದಿದ್ದಾರೆ. ಅಲನ್ ಗಾಯನಕ್ಕೆ ದಾಫ್ನೇ ಸ್ಟೆಪ್ ಹಾಕಲು ಶುರುವಿಟ್ಟುಕೊಂಡಿದ್ದಾರೆ.

ದಾಫ್ನೇ ಮಾಸ್ಕ್‌ ಹಾಕಿಕೊಂಡಿದ್ದರೂ ಸಹ ಅವರ ಮುಖದಿಂದ ಮಂದಹಾಸ ಹಾಗೇ ಎದ್ದೆದ್ದು ಕಾಣುತ್ತಿದೆ. ಮೂರು ನಿಮಿಷಗಳ ಈ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...