alex Certify ಸೋನು ಸೂದ್ ಗೆ `ಕೋವಿಡ್-19 ಹೀರೋ’ ಪಟ್ಟ ನೀಡಿದ ಫೋರ್ಬ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನು ಸೂದ್ ಗೆ `ಕೋವಿಡ್-19 ಹೀರೋ’ ಪಟ್ಟ ನೀಡಿದ ಫೋರ್ಬ್ಸ್

ಕೊರೊನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ನಟ ಸೋನು ಸೂದ್ ಅನೇಕರಿಗೆ ದೇವರಾಗಿದ್ದರು. ವಲಸೆ ಕಾರ್ಮಿಕರು ಸೇರಿದಂತೆ ಅನೇಕರಿಗೆ ಸೋನು ಸಹಾಯ ಮಾಡಿದ್ರು. ಈ ಕಾರಣಕ್ಕೆ ಅವರನ್ನು ರಿಯಲ್ ಹಿರೋ ಎಂದು ಅನೇಕರು ಕರೆದಿದ್ದರು. ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಸಮಾಜಸೇವೆ ಮಾಡಿದ್ದ ಸೋನು ಸೂದ್ ಗೆ ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿದ್ದವು. ಈಗ ಸೋನು ಸೂದ್ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.

ಸೋನು ಸೂದ್ ಗೆ ಫೋರ್ಬ್ಸ್ ನಿಂದ ಲೀಡರ್‌ಶಿಪ್ ಅವಾರ್ಡ್ 2021 ನೀಡಿ ಗೌರವಿಸಲಾಗಿದೆ. ಸೋನು ಸೂದ್ ‘ಕೋವಿಡ್ -19 ಹೀರೋ’ ಎಂದುಫೋರ್ಬ್ಸ್  ಬಣ್ಣಿಸಿದೆ. ಈ ಪ್ರಶಸ್ತಿ ಸಿಕ್ಕ ನಂತ್ರ ಕೈ ಮುಗಿದು ಟ್ವೀಟ್ ಮೂಲಕ ಸೋನು ಸೂದ್  ಕೃತಜ್ಞತೆ ಸಲ್ಲಿಸಿದ್ದಾರೆ.

ಸೋನು ಸೂದ್ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆ ಬರ್ತಿದೆ. ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಲಾಕ್‌ಡೌನ್‌ನಿಂದ ಪ್ರಾರಂಭವಾದ ಸೋನು ಸಮಾಜ ಸೇವೆ ಈಗ್ಲೂ ಮುಂದುವರೆದಿದೆ. ಸಹಾಯ ಕೇಳಿ ಬಂದ ಅನೇಕರಿಗೆ ಸೋನು ಸೂದ್ ಸಹಾಯ ಮಾಡುತ್ತ ಬಂದಿದ್ದಾರೆ. ಚಿಕಿತ್ಸೆ ಹಾಗೂ ಶಿಕ್ಷಣಕ್ಕಾಗಿ ಸೋನು ನೆರವು ನೀಡುತ್ತ ಬಂದಿದ್ದಾರೆ.

ಇಷ್ಟೇ ಅಲ್ಲ ಸೋನು ಮಾಡಿದ ಈ ಕಾರ್ಯವನ್ನು ಗಮನದಲ್ಲಿಟ್ಟುಕೊಂಡು ಸ್ಪೈಸ್‌ಜೆಟ್  ವಿಮಾನಯಾನ ಸಂಸ್ಥೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...