alex Certify ಹಸಿದವರಿಗೆ ಸದ್ದಿಲ್ಲದೆ ನೆರವು ನೀಡುತ್ತಿದ್ದಾರೆ ಸಲ್ಮಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿದವರಿಗೆ ಸದ್ದಿಲ್ಲದೆ ನೆರವು ನೀಡುತ್ತಿದ್ದಾರೆ ಸಲ್ಮಾನ್

ಮುಂಬೈ: ಕೋವಿಡ್-19 ಲಾಕ್‌ಡೌನ್ ನಿಂದ ತೊಂದರೆಗೀಡಾದ ಮುಂಬೈ ನಿವಾಸಿಗಳಿಗೆ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ನೆರವಾಗುತ್ತಿದ್ದಾರೆ.

“ಬೀಯಿಂಗ್ ಹಂಗ್ರಿ” ಎಂಬ ಫುಡ್ ಟ್ರಕ್ ಅನ್ನು ಸಲ್ಮಾನ್ ಖಾನ್ ಪ್ರಾರಂಭಿಸಿದ್ದು, ಅದರ ಮೂಲಕ ದಿನಸಿ ಕಿಟ್ ಗಳನ್ನು ವಿತರಿಸುತ್ತಿದ್ದಾರೆ. ಸಾಕಷ್ಟು ಜನ ಸರದಿಯಲ್ಲಿ ನಿಂತು ಆಹಾರ ಸಾಮಗ್ರಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.‌

ಸಲ್ಮಾನ್ ಖಾನ್ ನೆರವಿಗೆ ಹಲವರು ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಶಿವಸೇನಾ ಮುಖಂಡ ರಾಹುಲ್ ಎನ್. ಕನಾಲ್ ಟ್ವಿಟರ್ ನಲ್ಲಿ ಸಲ್ಮಾನ್ ಖಾನ್‌ ಗೆ ಅಭಿನಂದನೆ ಸಲ್ಲಿಸಿದ್ದು, “ಥ್ಯಾಂಕ್ಯು@ ಬೀಯಿಂಗ್ ಸಲ್ಮಾನ್ ಖಾನ್ ಭಾಯ್, ಅಗತ್ಯವಿದ್ದವರಿಗೆ ನೀವು ಸದ್ದಿಲ್ಲದೆ ನೆರವಾಗುತ್ತಿದ್ದೀರಿ. ಜೈ ಹೋ” ಎಂದು ಬರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಿದೆ. 37 ಸಾವಿರ ಜನರಿಗೆ ಸೋಂಕು ತಗಲಿದೆ. ಅದರಲ್ಲಿ 22 ಸಾವಿರ ಜನ ಮುಂಬೈನವರೇ ಆಗಿದ್ದಾರೆ. ರಾಜ್ಯದಲ್ಲಿ 1,300 ಜನ ಇದುವರೆಗೆ ಕೋವಿಡ್ – 19 ನಿಂದ ಸಾವನ್ನಪ್ಪಿದ್ದು, ಅದರಲ್ಲಿ‌ 800 ಜನ ಮುಂಬೈನವರೇ ಆಗಿದ್ದಾರೆ. ರೋಗ ಹಾಗೂ ಅದರಿಂದ ಬಚಾವಾಗಲು ಮಾಡಿದ ಲಾಕ್ ಡೌನ್ ನಿಂದ ಜನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸಲ್ಮಾನ್ ನೆರವು ನಿಜವಾಗಿಯೂ ಅನುಕೂಲವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...