alex Certify ಬ್ಯಾಟ್ ಮ್ಯಾನ್ – ಸ್ಪೈಡರ್ ಮ್ಯಾನ್ ಮಧ್ಯೆ ಸಂಗೀತ ಸಮರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಟ್ ಮ್ಯಾನ್ – ಸ್ಪೈಡರ್ ಮ್ಯಾನ್ ಮಧ್ಯೆ ಸಂಗೀತ ಸಮರ…!

ಮಕ್ಕಳ ಪಾಲಿನ ಟಿವಿ ಸೂಪರ್ ಹೀರೋಗಳಾದ ಬ್ಯಾಟ್ ಮ್ಯಾನ್ ಮತ್ತು ಸ್ಪೈಡರ್ ಮ್ಯಾನ್ ಮಧ್ಯೆ ಯುದ್ಧವೊಂದು ನಡೆದರೆ ಹೇಗಿರುತ್ತದೆ ?

ಹೇಗಿರಲು ಸಾಧ್ಯ ? ಸದಾ ಒಳ್ಳೆಯವರ ಪರವೇ ಇರುವ, ರಕ್ಷಣೆ ನೀಡುವ, ಸಮಸ್ಯೆ ಬಂದಾಕ್ಷಣ ದೇವರಂತೆ ಪ್ರತ್ಯಕ್ಷವಾಗುವ ಚಿತ್ರ-ವಿಚಿತ್ರ ದಿರಿಸು ಧರಿಸಿ, ಮುಖವಾಡ ತೊಟ್ಟ ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್, ಹೀ ಮ್ಯಾನ್, ಹಲ್ಕ್ ಎಲ್ಲ ಕಾಲ್ಪನಿಕ ಪಾತ್ರಗಳೂ ಮಕ್ಕಳ ಲೆಕ್ಕದಲ್ಲಿ ಹೀರೋಗಳೆ.

ಈ ಹೀರೋಗಳ ನಡುವೆ ಒಂದು ರಣರೋಚಕ ಯುದ್ಧ. ಬ್ಯಾಟ್ ಮ್ಯಾನ್ v/s ಸ್ಪೈಡರ್ ಮ್ಯಾನ್ ಮಧ್ಯೆ ಕಂಡರಿಯದ ಕದನ ನಡೆದುಬಿಟ್ಟರೆ ?

ಹೀರೋಗಳಿಬ್ಬರ ಮಧ್ಯೆಯೇ ಯುದ್ಧವೇ ? ಹೌದು, ಇಬ್ಬರ ನಡುವೆ ಸಮರ. ಅಂತಿಂಥಾ ಸಮರವಲ್ಲ, ಸಂಗೀತ ಸಮರ.

ಬ್ಯಾಟ್ ಮ್ಯಾನ್ ವೇಷಧಾರಿಯೊಬ್ಬ ನಡು ರಸ್ತೆಯಲ್ಲಿ ಕುಳಿತು ಹಾಡುತ್ತಾ, ಗಿಟಾರ್ ನುಡಿಸುತ್ತಿರುತ್ತಾನೆ. ಸ್ವಲ್ಪ ಹೊತ್ತಿನ ನಂತರ ಏಕಚಕ್ರದ ಸೈಕಲ್ ಮೇಲೆ ಬರುವ ಸ್ಪೈಡರ್ ಮ್ಯಾನ್ ವೇಷಧಾರಿ ಬ್ಯಾಗ್ ಪೈಪರ್ ನುಡಿಸುತ್ತಾ ಬ್ಯಾಟ್ ಮ್ಯಾನ್ ಸುತ್ತ ಗಿರಕಿ ಹೊಡೆಯುತ್ತಾನೆ.

ರೆಕ್ಸ್ ಚಾಪ್ಮೆನ್ ಎಂಬಾತ ವಿಡಿಯೋವನ್ನು ಟ್ವೀಟ್ ಮಾಡಿದ್ದು, ವಿಡಿಯೋ ಕಂಡ ನೆಟ್ಟಿಗರು ಉಲ್ಲಸಿತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...