ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸೇನ್ ಖಾನ್ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ಸ್ವತಃ ಮಾಹಿತಿ ಶೇರ್ ಮಾಡಿರುವ ಸುಸ್ಸೇನ್ ಖಾನ್, ನಕಲಿ ಇಮೇಲ್ ಬಳಸಿ ನನ್ನ ಖಾತೆಯನ್ನ ಹ್ಯಾಕ್ ಮಾಡಲಾಗಿತ್ತು. ಪ್ರತಿಯೊಬ್ಬರು ನಕಲಿ ಇಮೇಲ್ಗಳಿಂದ ಬರುವ ನೋಟಿಫಿಕೇಶನ್ಗಳ ಬಗ್ಗೆ ಎಚ್ಚರದಿಂದಿರಿ.
ಮೋಸದ ಸಂದೇಶಗಳ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ನನ್ನ ಖಾತೆ ಹ್ಯಾಕ್ ಆಗಿದ್ದರ ಬಗ್ಗೆ ನಾನು ಇನ್ಸ್ಟಾಗ್ರಾಂಗೆ ಮಾಹಿತಿ ರವಾನಿಸಿದೆ. ಅವರು ಕೂಡಲೇ ನನ್ನ ಖಾತೆಯನ್ನ ಹ್ಯಾಕರ್ಸ್ ಕಾಟದಿಂದ ಬಚಾವ್ ಮಾಡಿದ್ದಾರೆ. ಇನ್ಸ್ಟಾಗ್ರಾಂ ಟೀಂಗೆ ನನ್ನ ಕಡೆಯಿಂದ ಧನ್ಯವಾದ. ವೈರಲ್ ಕಳ್ಳರು ಹಾಗೂ ಡಕಾಯಿತರಿಂದ ಎಚ್ಚರಿಕೆಯಿಂದಿರಿ ಅಂತಾ ಬರೆದುಕೊಂಡಿದ್ದಾರೆ.
ಏತನ್ಮಧ್ಯೆ ಸುಸೇನ್ ಅವರ ತಾಯಿ ಝರೀನಾ ಖಾನ್ ಇತ್ತೀಚೆಗಷ್ಟೇ ಕರೊನಾ ಸೋಂಕಿಗೆ ಒಳಗಾಗಿದ್ದಾರೆ.