ಬಾಲಿವುಡ್ನ ಎವರ್ಗ್ರೀನ್ ಚಿತ್ರಗಳು ಹಾಗೂ ಹಾಡುಗಳು ಜನರ ಮನದಲ್ಲಿ ಯಾವ ಮಟ್ಟಿಗೆ ಉಳಿದುಬಿಡುತ್ತವೆ ಎಂದರೆ; ರಿಲೀಸ್ ಆಗಿ ದಶಕಗಳೇ ಕಳೆದರೂ ಜನರು ಅವುಗಳನ್ನು ಇನ್ನೂ ಗುನುಗುವ ಮಟ್ಟದಲ್ಲಿ.
ಇದೀಗ ಇರಾನ್ ಮೂಲದ ಕಲಾವಿದರೊಬ್ಬರು ಜನಪ್ರಿಯ ಹಿಂದಿ ಹಾಡೊಂದಕ್ಕೆ ತಮ್ಮದೇ ವಿಶೇಷ ಟಚ್ ಕೊಟ್ಟಿದ್ದು, ಆನ್ಲೈನ್ನಲ್ಲಿ ಸದ್ದು ಮಾಡಿದ್ದಾರೆ.
ಹುಚ್ಚಾಟದ ಪರಮಾವಧಿ: ನಿರ್ಮಾಣ ಕಾರ್ಮಿಕರ ನಡುವೆ ಮಾರಾಮಾರಿ
ಶಾರುಖ್ ಖಾನ್ ಹಾಗೂ ಕಾಜೋಲ್ ಅಭಿನಯದ ಕಭಿ ಖುಷಿ ಕಭಿ ಗಮ್ ಚಿತ್ರದ ’ಯೇ ಲಡಕೀ ಹೈ’ ಹಾಡಿನ ಮೇಲೊಂದು ವಿಡಿಯೋ ಮಾಡಿರುವ ಈ ಕಲಾವಿದೆ ತಮ್ಮ ಎರಡೂ ಕೆನ್ನೆಗಳ ಮೇಲೆ ಹಾಡಿನಲ್ಲಿರುವ ಪಾತ್ರಗಳ ಚಿತ್ರ ಬರೆದುಕೊಂಡು ಸ್ಟೆಪ್ಗಳನ್ನು ಹಾಕಿದ್ದಾರೆ.
ಫೇಷಿಯಲ್ ಕಲೆಯ ಉಚ್ಛ್ರಾಯ ಸ್ಥಿತಿಯಂತೆ ಕಾಣುವ ಈ ವಿಡಿಯೋದಲ್ಲಿ ತಮ್ಮೆರಡು ಕೆನ್ನೆಗಳನ್ನೇ ಹಾಡಿನ ಪಾತ್ರಧಾರಿಗಳನ್ನಾಗಿ ನೃತ್ಯ ಮಾಡಿಸಿದ್ದಾರೆ ಈ ಕಲಾವಿದೆ. ಈ ವಿಡಿಯೋವನ್ನು ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ ಆರ್ಜೆ ಸಯೆಮಾ.
https://www.instagram.com/p/CNfYSBap8XO/?utm_source=ig_web_copy_link
https://www.instagram.com/p/CBilLT0DatW/?utm_source=ig_web_copy_link
https://www.instagram.com/p/CK8xiCvgthK/?utm_source=ig_web_copy_link