alex Certify ಹುಚ್ಚಾಟದ ಪರಮಾವಧಿ: ನಿರ್ಮಾಣ ಕಾರ್ಮಿಕರ ನಡುವೆ ಮಾರಾಮಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಚ್ಚಾಟದ ಪರಮಾವಧಿ: ನಿರ್ಮಾಣ ಕಾರ್ಮಿಕರ ನಡುವೆ ಮಾರಾಮಾರಿ

ನಿರ್ಮಾಣ ಕಾರ್ಮಿಕರ ನಡುವೆ ಆರಂಭಗೊಂಡ ಜಗಳವೊಂದು ಪರಸ್ಪರ ಇಟ್ಟಿಗೆಗಳನ್ನು ಎಸೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಿರುವುದನ್ನು ರೆಕಾರ್ಡ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಕಜಕಸ್ತಾನದ ಕರಾಗಂಡಾದಲ್ಲಿ ಈ ಘಟನೆ ಜರುಗಿದೆ. ಏಪ್ರಿಲ್ 8ರಂದು ಪೋಸ್ಟ್ ಮಾಡಲಾದ ಬಳಿಕ ಈ ವಿಡಿಯೋ ವೈರಲ್ ಆಗಿದ್ದು, ಬಿಲ್ಡರ್‌ಗಳ ಎರಡು ಪ್ರತ್ಯೇಕ ಗುಂಪುಗಳ ನಡುವಿನ ಕಚ್ಚಾಟವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಕಟ್ಟಡಗಳನ್ನು ಪ್ರತ್ಯೇಕಿಸುವ ವಿಭಜಕ ಗೋಡೆ ವಿಚಾರವಾಗಿ ಇತ್ತಂಡಗಳ ನಡುವೆ ಈ ಜಗಳವೇರ್ಪಟ್ಟಿದೆ.

ನಾಲ್ಕು ವರ್ಷದ ಪೋರನ ಮಹದಾಸೆ ಪೂರೈಸಿದ ಅಬುಧಾಬಿ ಪೊಲೀಸರು

ಜಗಳ ಆರಂಭಗೊಂಡು ಕೆಲ ನಿಮಿಷಗಳ ಬಳಿಕ ಕಾರ್ಮಿಕರು ಪರಸ್ಪರರ ಮೇಲೆ ಇಟ್ಟಿಗೆಗಳು ಹಾಗೂ ಬ್ಲಾಕ್‌ಗಳನ್ನು ಎಸೆದಾಡಿಕೊಳ್ಳುತ್ತಿದ್ದಾರೆ. ಕೆಲವರು ಹಿಂಸಾಚಾರದಿಂದ ಬಚಾವಾಗಿ ಓಡಿಹೋದರೆ ಮಿಕ್ಕವರು ಹೆಲ್ಮೆಟ್‌ ಹಾಗೂ ಇತರ ರಕ್ಷಣಾ ಕವಚಗಳ ಮೇಲೆ ಕಚ್ಚಾಟ ಮುಂದುವರೆಸಿದ್ದಾರೆ.

ಜಗಳದಲ್ಲಿ 25 ಮಂದಿ ಭಾಗಿಯಾಗಿದ್ದು ಎಲ್ಲರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲಿಸರು ತಿಳಿಸಿದ್ದಾರೆ. ಕ್ರೇನ್ ನಿರ್ವಾಹಕನೊಬ್ಬ ಮೇಲಿಂದ ಇಟ್ಟಿಗೆಯೊಂದನ್ನು ಎಸೆದ ಕಾರಣ ಈ ಜಗಳ ಆರಂಭಗೊಂಡಿದೆ ಎನ್ನಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...