alex Certify ಗರ್ಭಿಣಿ ಅನುಷ್ಕಾ ಧರಿಸಿದ್ದ ಕಪ್ಪು ಬಣ್ಣದ ಡ್ರೆಸ್ ಬೆಲೆ ಎಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಅನುಷ್ಕಾ ಧರಿಸಿದ್ದ ಕಪ್ಪು ಬಣ್ಣದ ಡ್ರೆಸ್ ಬೆಲೆ ಎಷ್ಟು ಗೊತ್ತಾ….?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮನೆಗೆ ಶೀಘ್ರವೇ ಹೊಸ ಅತಿಥಿಯ ಆಗಮನವಾಗಲಿದೆ. ಅನುಷ್ಕಾ ಶರ್ಮಾಗೆ ತಿಂಗಳು ತುಂಬಿದೆ. ಅನುಷ್ಕಾ ಪತಿ ವಿರಾಟ್ ಕೊಹ್ಲಿ ಜೊತೆ ಆಸ್ಪತ್ರೆಗೆ ಹೋಗಿ ಬರ್ತಿದ್ದಾರೆ. ಅನುಷ್ಕಾ ಚೆಕ್ ಅಪ್ ಗೆ ಬಂದಾಗ ಕಪ್ಪು ಬಣ್ಣದ ಮೆಟರ್ನಿಟಿ ಡ್ರೆಸ್ ಧರಿಸಿದ್ದರು.

ಅನುಷ್ಕಾ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನುಷ್ಕಾ ಡ್ರೆಸ್ ಅಭಿಮಾನಿಗಳ ಗಮನ ಸೆಳೆದಿದೆ. ಮೈಸನ್ ಮಾರ್ಗಿಲಾರಿಂದ ಅನುಷ್ಕಾ ಡ್ರೆಸ್ ಖರೀದಿ ಮಾಡಿದ್ದಾರೆ. ಇದ್ರ ಜೊತೆ ಬಿಳಿ ಸ್ನೀಕರ್ ಧರಿಸಿರುವ ಅನುಷ್ಕಾ ಕೂದಲನ್ನು ಹಾಗೆ ಬಿಟ್ಟಿದ್ದಾರೆ.

ಸಿಂಪಲ್ ಆಗಿ ಕಾಣುವ ಈ ಡ್ರೆಸ್ ಬೆಲೆ ಕೇಳಿದ್ರೆ ದಂಗಾಗ್ತಿರಾ. ಆನ್‌ಲೈನ್‌ನಲ್ಲಿ  ಇದರ ಬೆಲೆ 363 ಯುಎಸ್‌ಡಿ ಅಂದರೆ 26,636 ರೂಪಾಯಿ. ವೆಬ್ ಸೈಟ್ ನಲ್ಲಿ ಎಲ್ಲ ಗಾತ್ರದ ಡ್ರೆಸ್ ಖರೀದಿಸಬಹುದು. ಗರ್ಭಧಾರಣೆ ಸಮಯವನ್ನು ಅನುಷ್ಕಾ ಎಂಜಾಯ್ ಮಾಡ್ತಿದ್ದಾರೆ. ಅನುಷ್ಕಾ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾರೆ. ಪತಿ ಕೊಹ್ಲಿ ಜೊತೆಗಿರುವ ಫೋಟೋಗಳನ್ನು ಅನುಷ್ಕಾ ಹಂಚಿಕೊಂಡಿದ್ದಾರೆ.

अनुष्का शर्मा

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...