alex Certify ವಿಶ್ವ ಮಹಿಳಾ ದಿನದಂದು ಪತ್ನಿ,ಮಗಳ ಫೋಟೋ ಹಾಕಿದ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಮಹಿಳಾ ದಿನದಂದು ಪತ್ನಿ,ಮಗಳ ಫೋಟೋ ಹಾಕಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಪ್ರಸಿದ್ಧ ಜೋಡಿ. ಆಗಾಗ ಇಬ್ಬರು ಪರಸ್ಪರ ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ,ಪತ್ನಿ ಅನುಷ್ಕಾ ಶರ್ಮಾಗಾಗಿ ವಿಶೇಷ ಪೋಸ್ಟ್ ಹಾಕಿದ್ದಾರೆ.

ಅನುಷ್ಕಾ ಶರ್ಮಾ,ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ. ಮಗಳು ವಾಮಿಕಾ ಕೂಡ ಅನುಷ್ಕಾರಂತಾಗಲಿ ಎಂದು ಬಯಸಿದ್ದಾರೆ. ಮಗಳು ವಾಮಿಕಾ ಹಾಗೂ ಪತ್ನಿ ಅನುಷ್ಕಾ ಶರ್ಮಾ ಜೊತೆಗಿರುವ ಫೋಟೋವನ್ನು ವಿರಾಟ್ ಕೊಹ್ಲಿ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಮಗು ಜನಿಸಿದ ನಂತ್ರ ಮಹಿಳೆಯ ಶಕ್ತಿ ಹಾಗೂ ದೈವತ್ವ ಅರ್ಥವಾಗುತ್ತದೆ. ದೇವರು ಅವರೊಳಗೆ ಒಂದು ಜೀವನವನ್ನು ಏಕೆ ಸೃಷ್ಟಿಸಿದನೆಂದು ಅರ್ಥಮಾಡಿಕೊಳ್ಳಿ. ಮಹಿಳೆಯರು ಪುರುಷರಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಕೊಹ್ಲಿ ಹೇಳಿದ್ದಾರೆ. ಹಾಗೆ ಪತ್ನಿ,ಮಗಳ ಜೊತೆ ವಿಶ್ವದ ಎಲ್ಲ ಮಹಿಳೆಯರಿಗೂ ಮಹಿಳಾ ದಿವಸದ ಶುಭಕೋರಿದ್ದಾರೆ. ಕೊಹ್ಲಿ ಈ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಸೆಲೆಬ್ರಿಟಿಗಳು ಕೊಹ್ಲಿ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. ಕೊಹ್ಲಿ,ಅನುಷ್ಕಾರನ್ನು ಹೊಗಳಿದ್ದು ಇದೇ ಮೊದಲಲ್ಲ. ಅನೇಕ ಸಂದರ್ಭದಲ್ಲಿ ಕೊಹ್ಲಿ,ಅನುಷ್ಕಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...