alex Certify ಅನುರಾಗ್ ಕಶ್ಯಪ್ ನಟಿಗೆ ನೀಡಿದ್ರಾ ಲೈಂಗಿಕ ಕಿರುಕುಳ…? ಇಲ್ಲಿದೆ ಬೆಚ್ಚಿಬೀಳಿಸುವ‌ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುರಾಗ್ ಕಶ್ಯಪ್ ನಟಿಗೆ ನೀಡಿದ್ರಾ ಲೈಂಗಿಕ ಕಿರುಕುಳ…? ಇಲ್ಲಿದೆ ಬೆಚ್ಚಿಬೀಳಿಸುವ‌ ಸತ್ಯ

Anurag Kashyap Now Faces Sexual Abuse Allegations from Rupa Dutta, Here's the Truth

ಮುಂಬೈ: ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್‌ ಮೇಲೆ ಪಾಯಲ್ ಘೋಷ್ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಅದಾಗಿ ಒಂದೇ ದಿನದಲ್ಲಿ ನಟಿ ರೂಪಾ ದತ್ತಾ ಕೂಡ ಅನುರಾಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.‌ 2014 ರಲ್ಲಿ ಕಶ್ಯಪ್ ತಮಗೆ ಕಳಿಸಿದ್ದರು ಎನ್ನಲಾದ ಸಂದೇಶದ ಸ್ಕ್ರೀನ್ ಶಾಟ್ ನ್ನು ದತ್ತಾ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಅನುರಾಗ್ ಸಫರ್ ಎಂಬ ಹೆಸರಿನ ಖಾತೆ ಹೊಂದಿರುವ ವ್ಯಕ್ತಿಯ, ವಿವಾಹಿತ ಮಹಿಳೆಯ ಬಗ್ಗೆ ಆಸಕ್ತಿ ಹೊಂದಿದ್ದೇನೆ ಎಂಬ ಸಂದೇಶಗಳು ದತ್ತಾ ಅವರು ಅಪ್ ಲೋಡ್ ಮಾಡಿದ ಸ್ಕ್ರೀನ್ ಶಾಟ್ ಗಳಲ್ಲಿದೆ. ಅನುರಾಗ್ ಕಶ್ಯಪ್ 2014 ರಲ್ಲಿ ಅನುರಾಗ್ ಸಫರ್ ಎಂಬ ಹೆಸರಿನ‌ ಖಾತೆ ಹೊಂದಿದ್ದರು ಎಂಬುದು ರೂಪಾ ಅವರ ಆರೋಪ. “ಫಿಲ್ಮ್ ಇಂಡಸ್ಟ್ರಿ ಕೆಟ್ಟದಲ್ಲ. ‌ಅದರಲ್ಲಿ ಕೆಲವು ಮೀ‌ನುಗಳು ಈ ರೀತಿ ಇವೆ. ನಾವು ಅವುಗಳನ್ನು ಗುರುತಿಸಿ ಕೊಳವನ್ನು ಸ್ವಚ್ಛ ಮಾಡಬೇಕು” ಎಂದು ರೂಪಾ ಕ್ಯಾಪ್ಶನ್ ನೀಡಿದ್ದಾರೆ.

ಈ ಆರೋಪದ ನಂತರ ರೂಪಾ ಟಿವಿಯೊಂದಕ್ಕೆ ಸಂದರ್ಶನ ನೀಡಿದ್ದು, ಸುಶಾಂತ ಸಿಂಗ್ ರಜಪೂತ್ ಪ್ರಕರಣದಲ್ಲೂ ಅನುರಾಗ್ ಕಶ್ಯಪ್ ಅವರನ್ನು ವಿಚಾರಣೆ ಮಾಡಬೇಕು ಎಂದಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಆಕೆ ಎಂದೂ ಅನುರಾಗ್ ಕಶ್ಯಪ್ ಅವರನ್ನು ಮುಖತಃ ಭೇಟಿಯಾಗಿಲ್ಲ.‌ ಈ ಸಂಗತಿಯನ್ನು ಸ್ವತಃ ಅವರೇ ಹೇಳಿದ್ದಾರೆ. ಕೇವಲ ಸಂದೇಶದ ಆಧಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಫ್ಯಾಕ್ಟ್ ಚೆಕ್ ಮಾಡಿ ನೋಡಲಾಗಿ ಬೆಚ್ಚಿಬೀಳಿಸುವ ಸಂಗತಿ ಬಹಿರಂಗವಾಗಿದೆ. ದತ್ತಾ ಅವರಿಗೆ ಸಂದೇಶ ಕಳಿಸಿದ ಅನುರಾಗ್ ಸಫರ್ ಎಂಬ ಹೆಸರಿನ ವ್ಯಕ್ತಿ ಐರ್ಲ್ಯಾಂಡ್ ನಲ್ಲಿರುವುದು ತಿಳಿದುಬಂದಿದೆ. ಪ್ರಚಾರ ಪಡೆಯುವ ಸಲುವಾಗಿ ರೂಪಾ ಇಂತಹ ಗುರುತರ ಆರೋಪ ಮಾಡಿದ್ರಾ ಎಂಬು ಅನುಮಾನ ಈಗ ಮೂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...