alex Certify ಸೂಪರ್ ಸ್ಟಾರ್ ರಜನಿಕಾಂತ್ ‘ಅಣ್ಣಾತೆ’ ನಾಳೆ ರಿಲೀಸ್, ಬೆಳಗಿನ ಜಾವ 4 ಗಂಟೆಗೆ ಫ್ಯಾನ್ಸ್ ಶೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್ ಸ್ಟಾರ್ ರಜನಿಕಾಂತ್ ‘ಅಣ್ಣಾತೆ’ ನಾಳೆ ರಿಲೀಸ್, ಬೆಳಗಿನ ಜಾವ 4 ಗಂಟೆಗೆ ಫ್ಯಾನ್ಸ್ ಶೋ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಅಣ್ಣಾತೆ’ ನವೆಂಬರ್ 4 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಬೆಳಗಿನಜಾವ 4 ಗಂಟೆಗೆ ಫ್ಯಾನ್ಸ್ ಶೋ ಆಯೋಜಿಸಲಾಗಿದೆ.

ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್ ಸೇರಿದಂತೆ ಬಹುದೊಡ್ಡ ತಾರಾಗಣ ಹೊಂದಿರುವ ಈ ಚಿತ್ರವನ್ನು ಸಿರುತ್ತೈ ಸಿವ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಅಣ್ಣಾತೆ’ ಹಾಡುಗಳು ಸೂಪರ್ ಹಿಟ್ ಆಗಿವೆ. ಟ್ರೇಲರ್ ನೋಡಿದ ಅಭಿಮಾನಿಗಳು, ಸಿನಿರಸಿಕರಲ್ಲಿ ಚಿತ್ರದ ಕುರಿತಾಗಿ ನಿರೀಕ್ಷೆ ಹೆಚ್ಚಾಗಿದೆ.

ತಮಿಳುನಾಡು ಸರ್ಕಾರ ನವೆಂಬರ್ 1 ರಿಂದ ಚಿತ್ರಮಂದಿರಗಳಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದ್ದು, ಪುದುಕೋಟೆ, ಚೆನ್ನೈ, ತೂತುಕುಡಿ ಸೇರಿದಂತೆ ಹಲವು ಕಡೆಗಳಲ್ಲಿ ನಾಳೆ ಬೆಳಗಿನಜಾವ 4 ಗಂಟೆಗೆ ‘ಅಣ್ಣಾತೆ’ ಪ್ರದರ್ಶನ ಆರಂಭವಾಗಲಿದೆ. ‘ಅಣ್ಣಾತೆ’ ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...