alex Certify ಬಾಲಿವುಡ್ ಗೀತೆ ಜೊತೆ ನಡೀತು ಪೊಲೀಸ್​ ತರಬೇತಿ: ವಿಶೇಷ ವಿಡಿಯೋ ಶೇರ್ ಮಾಡಿದ ಆನಂದ್​ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಗೀತೆ ಜೊತೆ ನಡೀತು ಪೊಲೀಸ್​ ತರಬೇತಿ: ವಿಶೇಷ ವಿಡಿಯೋ ಶೇರ್ ಮಾಡಿದ ಆನಂದ್​ ಮಹೀಂದ್ರಾ

ಪೊಲೀಸರ ತರಬೇತಿ ಪ್ರಕ್ರಿಯೆ ಕಠಿಣವಾಗಿ ಇರುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿಸಲು ನೀಡುವ ಈ ತರಬೇತಿಯ ಅವಧಿ ನಿಜಕ್ಕೂ ಒಂದು ದೊಡ್ಡ ಸವಾಲು. ಆದರೆ ನಾಗಾಲ್ಯಾಂಡ್​ ಪೊಲೀಸರು ಈ ಕಠಿಣ ತರಬೇತಿಯನ್ನೂ ಎಂಜಾಯ್​ ಮಾಡಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ನಾಗಾಲ್ಯಾಂಡ್​ ಪೊಲೀಸರು ತರಬೇತಿ ಅವಧಿಯಲ್ಲಿರುವ ಪೊಲೀಸರ ಮಾರ್ಚ್ ಫಾಸ್ಟ್ ವೇಳೆ‌ ತರಬೇತುದಾರ ಬಾಲಿವುಡ್​ ಗೀತೆ ಢಲ್​ ಗಯಾ ದಿನ್​, ಹೋ ಗಯಾ ಶಾಮ್​ ಎಂಬ ಹಾಡನ್ನ ಹಾಡಿದ್ದಾರೆ. 45 ಸೆಕೆಂಡ್​ಗಳ ವಿಡಿಯೋವನ್ನ ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಆನಂದ್​ ಮಹೀಂದ್ರಾರ ಈ ಪೋಸ್ಟ್​ 10 ಸಾವಿರಕ್ಕೂ ಅಧಿಕ ಲೈಕ್ಸ್ ಸಂಪಾದಿಸಿದೆ.

— anand mahindra (@anandmahindra) July 8, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...