alex Certify ಕೊರೊನಾ ಮಧ್ಯೆಯೂ ಬಿಡುಗಡೆಯಾಯ್ತು ರಾಧೆ: ಸಿನಿಮಾ ನೋಡಲು ಸಾಲಿನಲ್ಲಿ ನಿಂತ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮಧ್ಯೆಯೂ ಬಿಡುಗಡೆಯಾಯ್ತು ರಾಧೆ: ಸಿನಿಮಾ ನೋಡಲು ಸಾಲಿನಲ್ಲಿ ನಿಂತ ಜನ

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಚಿತ್ರ ರಾಧೆ, ದುಬೈನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಈ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾದು ಕುಳಿತಿದ್ದರು. ಟಿಕೆಟ್‌ಗಾಗಿ ಚಿತ್ರಮಂದಿರಗಳ ಹೊರಗೆ ಉದ್ದನೆಯ ಸಾಲಿತ್ತು. ಭಾರತದಲ್ಲಿ ಶುಕ್ರವಾರ ಚಿತ್ರ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಝೀ 5ನಲ್ಲಿ ಚಿತ್ರ ವೀಕ್ಷಿಸಬಹುದಾಗಿದೆ.

ಸಲ್ಮಾನ್ ಖಾನ್ ಗೆ ಭಾರತದಲ್ಲಿ ಮಾತ್ರವಲ್ಲದೆ ದುಬೈನಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಸಲ್ಮಾನ್ ಖಾನ್ ಸಿನಿಮಾ ದುಬೈನಲ್ಲೂ ಉತ್ತಮ ಗಳಿಕೆ ಮಾಡುತ್ತದೆ. ಕಳೆದ ವರ್ಷ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಕೋವಿಡ್ ಕಾರಣ ಮುಂದೂಡಲಾಗಿತ್ತು. ಇದು ಸಲ್ಲು ಅಭಿಮಾನಿಗಳನ್ನು ನಿರಾಸೆಗೊಳಿಸಿತ್ತು. ಈದ್ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ.

ಸಲ್ಲು ಜೊತೆ ದಿಶಾ ಪಟಾನಿ ಮತ್ತು ಜಾಕಿ ಶ್ರಾಫ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದ ಚಿತ್ರ ಇದಾಗಿದೆ. ಚಿತ್ರ ಬಿಡುಗಡೆ ವೇಳೆ ಪೈರಸಿ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, ಸಿನಿಮಾ ತಯಾರಿಸಲು ಸಾಕಷ್ಟು ಶ್ರಮಿಸಿದ್ದು, ಪೈರಸಿ ಮಾಡಬೇಡಿ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...