alex Certify ‘ಲಕ್ಷ್ಮೀ ಬಾಂಬ್’ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲ್ಲ, ಏಕೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಕ್ಷ್ಮೀ ಬಾಂಬ್’ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲ್ಲ, ಏಕೆ ಗೊತ್ತಾ…?

ಕೊರೊನಾ ಸೋಂಕು ವಿವಿಧ ಕ್ಷೇತ್ರವನ್ನು ಕಂಗೆಡಿಸಿದೆ. ವಿಶೇಷವೆಂದರೆ ಹಲವು ಉದ್ಯಮಗಳು ತಮ್ಮ ಸ್ವರೂಪವನ್ನೇ ಬದಲಿಸಿಕೊಳ್ಳಬೇಕಾಗಿ ಬರಬಹುದು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಲಕ್ಷ್ಮೀಬಾಂಬ್ ಚಲನಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಬದಲು ಹಾಟ್ ಸ್ಟಾರ್, ಡಿಸ್ನಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಚಿತ್ರದ ನಟ ಮತ್ತು ನಿರ್ಮಾಪಕರು ಪ್ರಥಮ ಪ್ರದರ್ಶನ ಸಂಬಂಧ ಚರ್ಚೆ ನಡೆಸಿದ್ದು, ಚಿತ್ರಮಂದಿರ ತಕ್ಷಣಕ್ಕೆ ಆರಂಭವಾಗುವ ಸಾಧ್ಯತೆ ಕಡಿಮೆ ಇರುವುದರಿಂದ ಪರ್ಯಾಯ ಮಾರ್ಗದ ಬಗ್ಗೆ ವಿಚಾರ ವಿನಿಮಯ ನಡೆಸಿದ್ದಾರೆ.

ಎಡಿಟಿಂಗ್, ಹಿನ್ನೆಲೆ ಸಂಗೀತ, ಮಿಕ್ಸಿಂಗ್ ಮತ್ತು vfx ಸೇರಿದಂತೆ ವಿವಿಧ ಕೆಲಸ ಬಾಕಿ ಉಳಿದಿದೆ, ಆದರೆ ಅವುಗಳನ್ನು ಚಿತ್ರತಂಡವು ತಮ್ಮ ಮನೆಗಳಲ್ಲಿ ನಿರ್ವಹಿಸುತ್ತಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಈ ನಡುವೆಯೂ ಜೂನ್ ವೇಳೆಗೆ ಚಿತ್ರವು ಪ್ರದರ್ಶನಕ್ಕೆ ಸಿದ್ಧವಾಗಲಿದೆ.

ಈ ಪ್ರಯತ್ನದಿಂದ ಚಿತ್ರತಂಡಕ್ಕೆ ನಷ್ಟವಾಗಬಾರದು ಎಂದು ಅಕ್ಷಯ್ ಕುಮಾರ್ ಬಯಸಿದ್ದಾರೆ. ಹಾಗೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಪ್ರದರ್ಶಿಸಿದರೆ ಸಣ್ಣ ಪಟ್ಟಣಗಳಿಗೆ ತಲುಪಿಸುವುದು ಕಷ್ಟವಾಗಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರವು 2011ರಲ್ಲಿ ಬಿಡುಗಡೆಯಾದ ತಮಿಳು ಚಿತ್ರದ ರಿಮೇಕ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...