alex Certify ಈ ದಿನದಂದು ಅಯೋಧ್ಯೆಯಲ್ಲಿ ಶುರುವಾಗಲಿದೆ ‘ರಾಮ್​ಸೇತು’ ಸಿನಿಮಾ ಶೂಟಿಂಗ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದಿನದಂದು ಅಯೋಧ್ಯೆಯಲ್ಲಿ ಶುರುವಾಗಲಿದೆ ‘ರಾಮ್​ಸೇತು’ ಸಿನಿಮಾ ಶೂಟಿಂಗ್​

ಬಾಲಿವುಡ್​ನ ಬ್ಯುಸಿಯೆಸ್ಟ್​ ನಟ ಅಕ್ಷಯ್​ ಕುಮಾರ್​ ಈ ವರ್ಷ ಬರೋಬ್ಬರಿ 6 ಸಿನಿಮಾಗಳ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಸದ್ಯ ಬಾಲಿವುಡ್​ನ ಈ ಖಿಲಾಡಿ ಮಾಲ್ಡೀವ್ಸ್​ನಲ್ಲಿ ಕುಟುಂಬದ ಜೊತೆ ವೆಕೆಷನ್​ ಮೂಡ್​ನಲ್ಲಿದ್ದಾರೆ. ಮಾಲ್ಡೀವ್ಸ್​ನಿಂದ ಹಿಂತಿರುಗಿದ ಬಳಿಕ ಬಚ್ಚನ್​ ಪಾಂಡೆ ಸಿನಿಮಾ ಶೂಟಿಂಗ್​ನಲ್ಲಿ ಅಕ್ಷಯ್​ ಕುಮಾರ್​ ನಿರತರಾಗಲಿದ್ದಾರೆ.

ಮೂಲಗಳ ಪ್ರಕಾರ ಬಚ್ಚನ್​ ಪಾಂಡೆ ಸಿನಿಮಾ ಶೂಟಿಂಗ್​ ಬಳಿಕ ಅಕ್ಷಯ್​ ʼರಾಮ್​ ಸೇತುʼ ಸಿನಿಮಾ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಅಕ್ಷಯ್​ ಕುಮಾರ್​, ನಿರ್ದೇಶಕ ಅಭಿಷೇಕ್​ ಶರ್ಮಾ ಹಾಗೂ ಕ್ರಿಯೇಟಿವ್​ ನಿರ್ಮಾಪಕ ಡಾ. ಚಂದ್ರಪ್ರಕಾಶ್​ ದ್ವಿವೇದಿ ಮಾರ್ಚ್ 18ರಂದು ಸಿನಿಮಾದ ಮುಹೂರ್ತಕ್ಕಾಗಿ ಅಯೋಧ್ಯೆಗೆ ತೆರಳಲಿದ್ದಾರೆ. ರಾಮ ಜನ್ಮಭೂಮಿಯಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಲಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಆಲಿಯಾ ಭಟ್

ʼರಾಮ್​ ಸೇತುʼ ಸಿನಿಮಾ ವಿಚಾರವಾಗಿ ಮಾತನಾಡಿದ ನಿರ್ದೇಶಕ ಅಭಿಷೇಕ್​ ಶರ್ಮಾ, ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್ ಪುರಾತತ್ವಶಾಸ್ತ್ರಜ್ಞರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ರು. ಈಗಾಗಲೇ ರಾಮ್​ ಸೇತು ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಲುಕ್​ನ್ನು ಚಿತ್ರತಂಡ ರಿವೀಲ್​ ಮಾಡಿದೆ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ಹಾಗೂ ನುಶ್ರತ್​​ ಭರುಚ್ಚಾ ತೆರೆ ಹಂಚಿಕೊಳ್ಳಲಿದ್ದಾರೆ.

ಇನ್ನೊಂದೆಡೆ ಅಕ್ಷಯ್​ ಕುಮಾರ್​ರ ಬಹುನಿರೀಕ್ಷಿತ ಸಿನಿಮಾ ಸೂರ್ಯವಂಶಿ ಏಪ್ರಿಲ್​​ 30ರಂದು ತೆರೆಗಪ್ಪಳಿಸಲಿದೆ. ಈ ಸಂಬಂಧ ಟ್ವೀಟ್​ ಮೂಲಕ ಅಕ್ಷಯ್​ ಕುಮಾರ್​ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...