alex Certify ‘ಗೋ ಮೂತ್ರ’ ಸೇವನೆ ಕುರಿತ ನಟ ಅಕ್ಷಯ್ ಹೇಳಿಕೆ ಬಳಿಕ ಗೂಗಲ್ ನಲ್ಲಿ ನಡೆದಿದೆ ಈ ಹುಡುಕಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೋ ಮೂತ್ರ’ ಸೇವನೆ ಕುರಿತ ನಟ ಅಕ್ಷಯ್ ಹೇಳಿಕೆ ಬಳಿಕ ಗೂಗಲ್ ನಲ್ಲಿ ನಡೆದಿದೆ ಈ ಹುಡುಕಾಟ

ಮುಂಬೈ: ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಆಯುರ್ವೇದ ಕಾರಣಕ್ಕೆ‌ ತಾವು ಪ್ರತಿ ದಿನ ಗೋ ಮೂತ್ರ ಸೇವನೆ ಮಾಡುವುದಾಗಿ ಹೇಳಿದ್ದಾರೆ.

ಬೆಲ್ ಬಾಟಮ್ ಚಿತ್ರದ ಶೂಟಿಂಗ್ ಗಾಗಿ ಅವರು ಸದ್ಯ ಸ್ಕಾಟ್ಲೆಂಡ್ ನಲ್ಲಿದ್ದಾರೆ. ಹುಮಾ ಖುರೇಷಿ ಹಾಗೂ ಲಾರಾ‌ ದತ್ ಭೂಪತಿ ಅವರ ಜತೆ ಬ್ರಿಟಿಷ್ ಸಾಹಸ ಕಾರ್ಯಕ್ರಮಗಳ ನಿರೂಪಕ ಬಿಯರ್ ಗ್ರಿಲ್ಸ್ ಅವರೊಟ್ಟಿಗೆ ಅಕ್ಷಯ್ ಕುಮಾರ್ ಅವರು ಈಚೆಗೆ ಇನ್ಸ್ಟಾಗ್ರಾಂ‌ ಲೈವ್ ಮಾಡಿದ್ದರು‌.

ವೈಲ್ಡ್ ವಿತ್ ಅಕ್ಷಯ್ ಕುಮಾರ್ ಕಾರ್ಯಕ್ರಮದಲ್ಲಿ ಆನೆ ಲದ್ದಿಯ ಟಿ ಕುಡಿಯಲು ನೀವು ಹೇಗೆ ಒಪ್ಪಿಕೊಂಡಿರಿ ಎಂದು ಹುಮಾ ಪ್ರಶ್ನಿಸುತ್ತಾರೆ. ಅದಕ್ಕೆ ಅಕ್ಷಯ್ ಕುಮಾರ್, “ನನಗೆ ಅದನ್ನು ಕುಡಿಯಲು ಯಾವುದೇ ಚಿಂತೆಯಾಗಲಿಲ್ಲ. ಏಕೆಂದರೆ, ನಾನು ಆಯುರ್ವೇದದ ಕಾರಣಕ್ಕೆ ಪ್ರತಿ ದಿನ ಗೋ ಮೂತ್ರ ಕುಡಿಯುತ್ತೇನೆ” ಎಂದಿದ್ದಾರೆ.

ಅಕ್ಷಯ್ ಕುಮಾರ್ ಅವರು ಈ ಹೇಳಿಕೆ ನೀಡುತ್ತಿದ್ದಂತೆ ಹಲವರು ಈ ಕುರಿತು ಗೂಗಲ್ ನಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಗೋ ಮೂತ್ರ ನಿಜವಾಗಿಯೂ ಔಷಧವಾ ಎಂದು‌ ಹುಡುಕಿದ್ದಾರೆ.

ಗೋ ಮೂತ್ರ ಪಾನದ ಬಗ್ಗೆ ಭಾರತದಲ್ಲಿ ಹಲವು ವರ್ಷಗಳಿಂದ‌ ಚರ್ಚೆ ನಡೆದೇ ಇದೆ. ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಹಾಗೂ ಸಂಸದರೊಬ್ಬರು ಗೋ ‌ಮೂತ್ರ ಪಾನದಿಂದ ಕೊರೊನಾ ಗುಣವಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಗೋ‌ ಮೂತ್ರ ಪಾನದಿಂದ ಕ್ಯಾನ್ಸರ್ ಗುಣವಾಗುತ್ತದೆ‌ ಎಂದೂ ಹಲವರು ಹೇಳಿಕೆ ನೀಡಿದ್ದಿದೆ. ಆದರೆ, ವಿಜ್ಞಾನಿಗಳು ಅದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಯಾವುದೇ ದಾಖಲೆ ಇಲ್ಲ ಎಂದಿದ್ದಾರೆ.

ಗೋ ಮೂತ್ರದ ಬಗ್ಗೆ ಅಧ್ಯಯನ ಮಾಡಲು ಸರ್ಕಾರ ಒಮ್ಮೆ‌ ಮುಂದಾಗಿತ್ತು. ಆಗ ಭಾರತದ 500 ಕ್ಕೂ ಅಧಿಕ ವಿಜ್ಞಾನಿಗಳು “ಆ ಅಧ್ಯಯನ ಕೈಗೊಳ್ಳುವುದು ಹಣ ಹಾಗೂ ಸಮಯದ ವ್ಯರ್ಥವಾಗುತ್ತದೆ” ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಇಲ್ಲಿ‌ ನೆನಪಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...