alex Certify ಯಶ್, ಅಕ್ಷಯ್ ಕುಮಾರ್, ಜೂ.NTR, ಅಮೀರ್ ಖಾನ್ ಸಿನಿಮಾಗಳಿಂದ ಗಲ್ಲಾಪೆಟ್ಟಿಗೆ ಘರ್ಷಣೆ: ಈ ವರ್ಷ ದಾಖಲೆಯ ಬಾಕ್ಸ್ ಆಫೀಸ್ ಕಲೆಕ್ಷನ್ ಗ್ಯಾರಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಶ್, ಅಕ್ಷಯ್ ಕುಮಾರ್, ಜೂ.NTR, ಅಮೀರ್ ಖಾನ್ ಸಿನಿಮಾಗಳಿಂದ ಗಲ್ಲಾಪೆಟ್ಟಿಗೆ ಘರ್ಷಣೆ: ಈ ವರ್ಷ ದಾಖಲೆಯ ಬಾಕ್ಸ್ ಆಫೀಸ್ ಕಲೆಕ್ಷನ್ ಗ್ಯಾರಂಟಿ

‘RRR’, ‘ಬಚ್ಚನ್ ಪಾಂಡೆ’, ‘KFG ಚಾಪ್ಟರ್ 2’, ‘ಲಾಲ್ ಸಿಂಗ್ ಚಡ್ಡಾ’ದಂತಹ ಅನೇಕ ಬಿಗ್ ಸ್ಟಾರ್ ಚಿತ್ರಗಳು ಈ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಘರ್ಷಣೆಗೆ ಕಾರಣವಾಲಿವೆ.

ಈ ಚಿತ್ರಗಳ ಆದಾಯದ ಮೇಲೆ ಸ್ಟಾರ್ ವಾರ್ ಪರಿಣಾಮ ಬೀರಬಹುದು. ಸಿನಿಮಾ ಸೆಟಲೈಟ್ ರೈಟ್ಸ್ ಮತ್ತು ಇತ್ತೀಚಿನ OTT ಸೇರಿದಂತೆ ಹಲವಾರು ಮೂಲಗಳಿಂದ ಆದಾಯವನ್ನು ಗಳಿಸುತ್ತವೆ.. ಆದಾಗ್ಯೂ, ಚಲನಚಿತ್ರದ ಯಶಸ್ಸನ್ನು ನಿರ್ಣಯಿಸುವಲ್ಲಿ ಥಿಯೇಟ್ರಿಕಲ್ ಬಾಕ್ಸ್ ಆಫೀಸ್ ಗಳಿಕೆ ಕೂಡ ಪ್ರಮುಖವಾಗಿದೆ.

ಶುಕ್ರವಾರ ಜನವರಿ 22 ರಂದು, ಅಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆ ‘ಲಾಲ್ ಸಿಂಗ್ ಚಡ್ಡಾ’ ಮೊದಲೇ ತಿಳಿಸಿದ ದಿನಾಂಕದಂತೆ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಏಪ್ರಿಲ್ 14 ರಂದು ‘ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಆಗಲಿದೆ.

ಸೌತ್ ಇಂಡಿಯಾ ಸೂಪರ್‌ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೆಜಿಎಫ್ ಚಾಪ್ಟರ್ 2’ ಅದೇ ದಿನ ಬಿಡುಗಡೆಯಾಗುತ್ತಿದೆ.

ಗಲ್ಲಾಪೆಟ್ಟಿಗೆಯಲ್ಲಿ ಸೆಣಸಾಡುವ ಚಿತ್ರಗಳ ಪಟ್ಟಿ ಇಲ್ಲಿದೆ

ಬಚ್ಚನ್ ಪಾಂಡೆ v/s RRR v/s ಶಂಶೇರಾ

ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ನಿರ್ಮಾಪಕರು ಇತ್ತೀಚೆಗೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದು, ಮಾರ್ಚ್ 18 ರಂದು ‘ಬಚ್ಚನ್ ಪಾಂಡೆ’ ಥಿಯೇಟರ್‌ ಗಳಿಗೆ ಬರಲಿದೆ. ಅದೇ ಸಮಯದಲ್ಲಿ, ‘ಆರ್‌ಆರ್‌ಆರ್’ ತಂಡವೂ ಸಹ ದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಉತ್ತಮಗೊಂಡರೆ ಮತ್ತು ಥಿಯೇಟರ್‌ಗಳು ಪೂರ್ಣ ಸಾಮರ್ಥ್ಯಕ್ಕೆ ತೆರೆದರೆ ಅವರು ತಮ್ಮ ಚಿತ್ರವನ್ನು ಮಾರ್ಚ್ 18 ರಂದು ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಮತ್ತು ಆಲಿಯಾ ಭಟ್ ನಟಿಸಿರುವ ಬಹು ನಿರೀಕ್ಷಿತ ಚಿತ್ರವು ಮೊದಲು ಜನವರಿ 7 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಚಿತ್ರ ಬಿಡುಗಡೆ ಮುಂದೂಡಬೇಕಾಯಿತು. ರಣಬೀರ್ ಕಪೂರ್ ಮತ್ತು ಸಂಜಯ್ ದತ್ ಅಭಿನಯದ ‘ಶಂಶೇರಾ’ ನಿರ್ಮಾಪಕರು ತಮ್ಮ ಬಹು ನಿರೀಕ್ಷಿತ ಚಿತ್ರವನ್ನು ಮಾರ್ಚ್ 18 ರಂದು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೂರರಲ್ಲಿ ಯಾವುದು ತಮ್ಮ ಬಿಡುಗಡೆಯ ದಿನಾಂಕವನ್ನು ಮುಂದೂಡುತ್ತದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

ಲಾಲ್ ಸಿಂಗ್ ಚಡ್ಡಾ v/s ಕೆಜಿಎಫ್ 2

ಯಶ್ ಅಭಿನಯದ ‘ಕೆಜಿಎಫ್ 2’ ಈಗಾಗಲೇ ಅದರ ಬಿಡುಗಡೆ ದಿನಾಂಕವನ್ನು ಏಪ್ರಿಲ್ 14 ಎಂದು ಘೋಷಿಸಿದೆ. ಆದರೆ ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಕೂಡ ಅದೇ ದಿನಾಂಕಕ್ಕೆ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಎರಡೂ ಚಿತ್ರಗಳು 2022 ರ ಬಹು ನಿರೀಕ್ಷಿತ ಚಿತ್ರಗಳಾಗಿರುವುದರಿಂದ ಇದು ದೊಡ್ಡ ಘರ್ಷಣೆಯಾಗಲಿದೆ. ದಳಪತಿ ವಿಜಯ್ ಅವರ ‘ಮೃಗ’ ಕೂಡ ಏಪ್ರಿಲ್ 14 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮೂರು ಚಿತ್ರಗಳು ರಿಲೀಸ್ ಆದ್ರೆ ಬಾಕ್ಸ್ ಆಫೀಸ್ ಘರ್ಷಣೆಗೆ ದಾರಿಯಾಗಲಿದೆ.

ಆದಿಪುರುಷ v/s ರಕ್ಷಾ ಬಂಧನ

ಬಾಹುಬಲಿ ನಟ ಪ್ರಭಾಸ್ ಅವರ ‘ಆದಿಪುರುಷ’ ಮತ್ತು ಅಕ್ಷಯ್ ಕುಮಾರ್ ಅವರ ಚಿತ್ರ ‘ರಕ್ಷಾ ಬಂಧನ’ ಅಧಿಕೃತವಾಗಿ ಆಗಸ್ಟ್ 11, 2022 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಎರಡೂ ಚಿತ್ರಗಳು ಆರಂಭದಿಂದಲೂ ಆಭರೀ ನಿರೀಕ್ಷೆ ಮೂಡಿಸಿವೆ. ‘ಆದಿಪುರುಷ’ದಲ್ಲಿ ಪ್ರಭಾಸ್ ಜೊತೆಗೆ ಕೃತಿ ಸನೋನ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತು ‘ರಕ್ಷಾ ಬಂಧನ’ದಲ್ಲಿ ಅಕ್ಷಯ್ ಕುಮಾರ್ ಎದುರು ಭೂಮಿ ಪೆಡ್ನೇಕರ್ ಕಾಣಿಸಿಕೊಳ್ಳಲಿದ್ದಾರೆ.

ರನ್ವೇ 34 v/s ಹೀರೋಪಂತಿ 2 v/s RRR

ಪ್ರತಿ ವರ್ಷ ಈದ್ ಸಮಯದಲ್ಲಿ ಸಲ್ಮಾನ್ ಖಾನ್ ಗಲ್ಲಾಪೆಟ್ಟಿಗೆಯನ್ನು ಆಳುತ್ತಿದ್ದರೆ, ಈ ವರ್ಷ, ಆ ಸ್ಥಾನಕ್ಕಾಗಿ ಒಬ್ಬರಲ್ಲ ಮೂವರು ನಟರ ನಡುವೆ ಪೈಪೋಟಿ ಇದೆ. ಅಜಯ್ ದೇವಗನ್ ಅವರ ‘ರನ್‌ವೇ 34’ ಮತ್ತು ಟೈಗರ್ ಶ್ರಾಫ್ ಅವರ ‘ಹೀರೋಪಂತಿ 2’ ಈ ವರ್ಷ ಈದ್‌ ನಲ್ಲಿ ಬಿಡುಗಡೆಯಾಗಲಿದೆ. ‘ಆರ್‌ಆರ್‌ಆರ್’ ಬಿಡುಗಡೆ ದಿನಾಂಕವನ್ನು ಮತ್ತಷ್ಟು ಮುಂದೂಡಿದರೆ ಈದ್‌ ನಲ್ಲಿ ಬಿಡುಗಡೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...