alex Certify ಮಹಿಳೆಯರ ನಾಯಕತ್ವವನ್ನ ಸಹಿಸೋ ಶಕ್ತಿ ಪುರುಷರಿಗಿಲ್ಲ: ಕಂಗನಾ ರಣಾವತ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ನಾಯಕತ್ವವನ್ನ ಸಹಿಸೋ ಶಕ್ತಿ ಪುರುಷರಿಗಿಲ್ಲ: ಕಂಗನಾ ರಣಾವತ್​

ಸದಾ ಒಂದಿಲ್ಲೊಂದು ವಿಚಾರಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಸುದ್ದಿಯಲ್ಲಿ ಇರ್ತಾರೆ ಬಾಲಿವುಡ್​ ಕಿರಿಕ್​ ಕ್ವೀನ್​ ಕಂಗನಾ ರಣಾವತ್​. ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದಿಂದ ಹಿಡಿದು ರೈತರ ಪ್ರತಿಭಟನೆಯವರೆಗೂ ಕಂಗನಾ ಮಾತ್ರ ಸುದ್ದಿಯಲ್ಲಿ ಇದ್ದಾರೆ. ಇದೀಗ ಮಯನ್ಮಾರ್​ ಮಿಲಿಟರಿ ಆಡಳಿತ ಬಗ್ಗೆಯೂ ಕಂಗನಾ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ.

ಮಿಲಿಟರಿ ಆಡಳಿತದಲ್ಲಿ ಮಯನ್ಮಾರ್​ ಎಂಬ ವಿಚಾರದ ಬಗ್ಗೆ ಟ್ವಿಟರ್​ನಲ್ಲಿ ಅಭಿಪ್ರಾಯ ಶೇರ್​ ಮಾಡಿರುವ ನಟಿ ಕಂಗನಾ, ಯಾಕಂದ್ರೆ ತುಂಬಾ ಮಂದಿ ಪುರುಷರಿಗೆ ಮಹಿಳೆಯರನ್ನ ತಮ್ಮ ಮೇಲಿನ ಸ್ಥಾನದಲ್ಲಿ ನೋಡೋದನ್ನ ಸಹಿಸಲು ಆಗೋದಿಲ್ಲ ಅಂತಾ ಟ್ವೀಟ್​ ಮಾಡಿದ್ದಾರೆ.

ಈ ಕಾರಣಕ್ಕೆ ಟೆನ್ನಿಸ್​ ತಾರೆ ಮಾರಿಯಾ ಶರಪೋವಾ ಬಳಿ ಕ್ಷಮೆ ಯಾಚಿಸಿದ ಕೇರಳಿಗರು…!

ನಾನು ರಂಗೂನ್​ ಎಂಬ ಸಿನಿಮಾವನ್ನ ಮಾಡಿದ್ದೇನೆ. ಆ ದಿನಗಳಲ್ಲಿ ನಾನು ರಂಗೂನ್​ ಹಾಗೂ 2ನೇ ಮಹಾಯುದ್ಧದಲ್ಲಿ ನಮ್ಮ ಭಾಗವಹಿಸುವಿಕೆ ಬಗ್ಗೆ ಅಧ್ಯಯನ ಮಾಡಿದ್ದೇನೆ. ಆಗಿನ ಕೆಲ ಘಟನೆಗಳನ್ನ ನೋಡಿದ್ರೆ ತುಂಬಾ ಮಂದಿ ಪುರುಷರಿಗೆ ಮಹಿಳೆಯರು ಮೇಲಿನ ಸ್ಥಾನದಲ್ಲಿ ಇರೋದನ್ನ ನೋಡೋಕೆ ಆಗಲ್ಲ ಎಂದು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...