alex Certify ಗೆಳತಿಯನ್ನು ಮೆಚ್ಚಿಸಲು ಮನೆಯನ್ನೇ ಥಿಯೇಟರ್ ಮಾಡಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯನ್ನು ಮೆಚ್ಚಿಸಲು ಮನೆಯನ್ನೇ ಥಿಯೇಟರ್ ಮಾಡಿದ ಭೂಪ…!

ತುಂಬಾ ಇಷ್ಟಪಡುವವರಿಗಾಗಿ ಸರ್ಪ್ರೈಸ್ ಕೊಡುವುದು ಹೊಸತೇನಲ್ಲ. ಆದರೆ ಇಲ್ಲೊಬ್ನ ಸರ್ಪ್ರೈಸ್ ನಲ್ಲೂ ವಿಶೇಷತೆ ಮೆರೆದಿದ್ದಾನೆ.

ಮೈಕಲ್ ಎಂಬಾತ ತನ್ನ ಗರ್ಲ್ ಫ್ರೆಂಡ್ ಮಾರಿಸಾಳಿಗೆ ಸರ್ಪ್ರೈಸ್ ನೀಡುವುದಕ್ಕಾಗಿ ತನ್ನ ಮನೆಯನ್ನು ಸಿನಿಮಾ ಹಾಲಾಗಿ ಪರಿವರ್ತಿಸಿದ ಪ್ರಸಂಗ ನಡೆದಿದೆ.

ಲಾಕ್ಡೌನ್ ಸಂದರ್ಭದಲ್ಲಿ ಸಿನಿಮಾ ಹಾಲ್ ಗಳು ಮುಚ್ಚಲ್ಪಟ್ಟಿವೆ. ಈ ಸಂದರ್ಭದಲ್ಲಿ ಸಿನಿಮಾ ಪ್ರೇಮಿ ತನ್ನ ಗರ್ಲ್ ಫ್ರೆಂಡ್ ಗೆ ಖುಷಿಪಡಿಸುವ ಉದ್ದೇಶದಿಂದ ಮೈಕಲ್ ಮನೆಯನ್ನು ಸಿನಿಮಾ ಹಾಲ್ ರೀತಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿದ್ದ.

ಆತನ ಮನೆ ಮುಂದೆ ಬಂದಿಳಿದ ಗೆಳತಿಯ ಕೈಗೆ ಟಿಕೆಟ್ ಕೊಡುವ ಆತ, ಮನೆಯೊಳಗೆ ಕಾಲಿಡುತ್ತಿದ್ದಂತೆ ಕೌಂಟರ್ ನಲ್ಲಿ ನಿಂತು ಟಿಕೆಟ್ ಸ್ವೀಕರಿಸಿ ಪಾಪ್ ಕಾರ್ನ್, ಪಾನೀಯ ನೀಡುತ್ತಾನೆ. ಮುಂದೆ ಸಾಗುವ ದಾರಿಯಲ್ಲಿ ಸಿನಿ ಮಂದಿರದ ಅನುಭವ ಆಗಬೇಕೆಂಬ ಕಾರಣಕ್ಕೆ ಕಾರಿಡಾರ್ ಲೈಟ್ ಅಳವಡಿಸಲಾಗಿತ್ತು. ಜತೆಗೆ ವಾಶ್ ರೂಂ‌ಬೋರ್ಡ್ ತೂಗುಹಾಕಲಾಗಿತ್ತು. ಚಿತ್ರ ಪ್ರದರ್ಶನದ ಹಾಲ್ ಒಳಗೆ ಕಾಲಿಟ್ಟಾಗಲೂ ವಿಶೇಷ ಲೈಟಿಂಗ್ಸ್ ಹಾಕಲಾಗಿತ್ತು. ಕುಳಿತುಕೊಳ್ಳಲು ಸ್ಪೆಷಲ್ ಸೀಟಿಂಗ್ ವ್ಯವಸ್ಥೆ ಕೂಡ ಮಾಡಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...