alex Certify ಕೊರೊನಾ ನಡುವೆಯೂ 50 ದಿನ ಪೂರೈಸಿದ ‘ಆಕ್ಟ್ 1978’ ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಡುವೆಯೂ 50 ದಿನ ಪೂರೈಸಿದ ‘ಆಕ್ಟ್ 1978’ ಸಿನಿಮಾ

ನವೆಂಬರ್ 20ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದ ‘ಆಕ್ಟ್ 1978’ ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ.

ಮಂಸೋರೆ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಪ್ರೇಕ್ಷಕರಿಂದ ಈ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ದೊರೆತಿದ್ದವು. ಇದೀಗ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂತೋಷವನ್ನು ನಿರ್ದೇಶಕ ಮಂಸೋರೆ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

‘ಆಕ್ಟ್ 1978’ ಸಿನಿಮಾ 50 ದಿನಗಳ ಮೈಲಿಗಲ್ಲು ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕ ಪ್ರಭುವಿಗೂ ಹಾಗೂ ಪ್ರದರ್ಶಕರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಪ್ರಮೋದ್ ಶೆಟ್ಟಿ, ಬಿ. ಸುರೇಶ್, ಸಂಚಾರಿ ವಿಜಯ್, ಶೋಭರಾಜ್, ಅವಿನಾಶ್, ಶ್ರುತಿ ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...