alex Certify ಸಮುದ್ರ ಕಿನಾರೆಯಲ್ಲಿ ಪತಿ ಜೊತೆ ನಟಿ ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರ ಕಿನಾರೆಯಲ್ಲಿ ಪತಿ ಜೊತೆ ನಟಿ ಯೋಗ

ಸಾಮಾಜಿಕ ಜಾಲತಾಣದಲ್ಲಿ ಕಿರುತೆರೆ ನಟಿ ಆಶ್ಕಾ ಗೊರಾಡಿಯಾ ಸಕ್ರಿಯವಾಗಿದ್ದಾರೆ. ಏಕ್ತಾ ಕಪೂರ್ ಧಾರಾವಾಹಿ ಮೂಲಕ ಹೆಸರು ಮಾಡಿರುವ ನಟಿ ಈಗ ಯೋಗದ ವಿಷ್ಯಕ್ಕೆ ಸುದ್ದಿಯಾಗಿದ್ದಾರೆ. ಸಮುದ್ರ ಕಿನಾರೆಯಲ್ಲಿ ಪತಿ ಜೊತೆ ಯೋಗ ಮಾಡ್ತಿರುವ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಪತಿ ಜೊತೆ ಕಠಿಣ ಆಸನಗಳನ್ನು ಮಾಡಿದ್ದಾರೆ ಆಶ್ಕಾ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ. ಆಶ್ಕಾ ಆಸನಕ್ಕೆ ಕೆಲವರು ಭೇಷ್ ಎಂದಿದ್ದಾರೆ. ಮತ್ತೆ ಕೆಲವರು ಈ ಆಸನಗಳನ್ನು ಹೇಳಿ ಕೊಡುವಂತೆ ಕೇಳಿದ್ದಾರೆ. ನಟಿ ಆಶ್ಕಾ ಹಾಗೂ ಪತಿ ಬ್ರೆಂಟ್ ಗೋಬಲ್ ಕೆಮೆಸ್ಟ್ರಿ ಚೆನ್ನಾಗಿದೆ.

ಸದ್ಯ ಇಬ್ಬರೂ ಗೋವಾದಲ್ಲಿ ರಜೆ ಮಜಾ ಅನುಭವಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇವರಿಬ್ಬರ ಫೋಟೋಗಳು ವೈರಲ್ ಆಗಿದ್ದವು. ಧಾರಾವಾಹಿ ಕುಸಮ್ ಮೂಲಕ ಆಶ್ಕಾ ವೃತ್ತಿ ಶುರು ಮಾಡಿದ್ದರು. ನಂತ್ರ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಆಶ್ಕಾ ನಟನೆಯಲ್ಲೂ ಭೇಷ್ ಎನ್ನಿಸಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...