ಬಾಲಿವುಡ್ ನಟ ಸೋನು ಸೂದ್ ಸದ್ಯ ಸುದ್ದಿಯಲ್ಲಿದ್ದಾರೆ. ಸೋನು ಅನೇಕ ಕಾರ್ಮಿಕರಿಗೆ ಮನೆ ಸೇರಲು ನೆರವಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕೂಡ ಅವ್ರನ್ನು ಹೊಗಳಿದೆ. ಮನೆ ತಲುಪಿದ ಕಾರ್ಮಿಕರು ಸೋನು ಸೂದ್ ಗೆ ಧನ್ಯವಾದ ಹೇಳಿದ್ದಾರೆ.
ಈ ಮಧ್ಯೆ ಮನೆ ತಲುಪಿದ ವ್ಯಕ್ತಿಯೊಬ್ಬ ಸೋನು ಸೂದ್ ರನ್ನು ದೇವರಿಗೆ ಹೋಲಿಸಿದ್ದಾರೆ. ಮನೆ ತಲುಪಿ ತಾಯಿ ಮುಂದೆ ಸೋನು ಸೂದ್ ರನ್ನು ದೇವರಿಗೆ ಹೋಲಿಕೆ ಮಾಡಿದ್ದಾರೆ. ದೇವರಂತೆ ಪೂಜಿಸುವುದಾಗಿ ಹೇಳಿದ್ದಾರೆ. ಟ್ವೀಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಸೋನು ಸೂದ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನನ್ನು ದೇವರಿಗೆ ಹೋಲಿಕೆ ಮಾಡಬೇಡಿ. ತಾಯಿಯನ್ನು ಪೂಜಿಸು. ಎಲ್ಲವೂ ಸರಿಯಾಗುತ್ತದೆ ಎಂದಿದ್ದಾರೆ. ಕಾರ್ಮಿಕರಿಗೆ ಸಹಾಯ ಮಾಡಿದ ಸೋನುಗೆ ವಿಚಿತ್ರ ಸಂದೇಶಗಳು ಕೂಡ ಬಂದಿದ್ದವು.