alex Certify ಮುಂಬೈನ ಸಿಮೆಂಟ್ ಚೀಲಕ್ಕೂ ಅಮೆರಿಕಾದ ಹಾಸ್ಯ ನಟನ ಚಿತ್ರಕ್ಕೂ ಎತ್ತಣದಿಂದೆತ್ತಣ ಸಂಬಂಧವಯ್ಯ ಎನ್ನುತ್ತಿದ್ದಾರೆ ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನ ಸಿಮೆಂಟ್ ಚೀಲಕ್ಕೂ ಅಮೆರಿಕಾದ ಹಾಸ್ಯ ನಟನ ಚಿತ್ರಕ್ಕೂ ಎತ್ತಣದಿಂದೆತ್ತಣ ಸಂಬಂಧವಯ್ಯ ಎನ್ನುತ್ತಿದ್ದಾರೆ ನೆಟ್ಟಿಗರು..!

A Cement Packet in Mumbai Has Jerry Seinfield's Face Plastered On ...

ಅಮೆರಿಕಾದ ಖ್ಯಾತ ಹಾಸ್ಯ ನಟ ಜೆರ್ರಿ ಸೇನ್ ಫೀಲ್ಡ್ ಓಡುತ್ತಿರುವ ಚಿತ್ರವೊಂದು ಸಿಮೆಂಟ್ ಚೀಲದ ಮೇಲೆ ಪತ್ತೆಯಾಗಿದೆ. ಸೇನ್ ಫೀಲ್ಡ್ 80 ರ ದಶಕದ ಮಕ್ಕಳನ್ನು ನಗಿಸಿದ ಕಲಾವಿದ. ಎಮ್ ಬಿ ಸಿ ವಾಹಿನಿಯ ಪ್ರಶಸ್ತಿ ಪುರಸ್ಕೃತ ಸೇನ್ ಫೀಲ್ಡ್ ಶೋ ಮೂಲಕ ಇಂದಿಗೂ, ಅವರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿರುವ ಸ್ಟ್ಯಾಂಡ್ ಅಪ್ ಕಾಮಿಡಿಯನ್.

ಬುಕ್ ಆಫ್ ಗೆನೆಸಿಯಾ ಎಂಬ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಆಗಿರುವ ಸಿಮೆಂಟ್ ಚೀಲದ ಮೇಲೆ ಸೇನ್ ಫೀಲ್ಡ್ ಓಡುತ್ತಿರುವ ಚಿತ್ರ ಅಚ್ಚಾಗಿದೆ. ಇನ್ ದ ಮೀನ್ ವೈಲ್ ಮುಂಬೈ ಎಂದು ಪೋಸ್ಟ್ ನಲ್ಲಿ ಬರೆದಿರುವುದರಿಂದ ಇದು ಮುಂಬೈನಲ್ಲಿ ಸಿಕ್ಕಿದ ಚೀಲ ಎಂದು ಊಹಿಸಬಹುದು.

ಅಲ್ಲದೆ, ಸೇನ್ ಫೀಲ್ಡ್ ಓಡುವ ಚಿತ್ರದ ಪಕ್ಕದಲ್ಲಿ ಏಕ್ ಕದಂ ಆಗೇ (ಒಂದು ಹೆಜ್ಜೆ ಬನ್ನಿ) ಎಂದು ಹಿಂದಿಯಲ್ಲಿ ಬರೆದಿರುವುದರಿಂದ ಇದು ಮುಂಬೈನಲ್ಲೇ ಪತ್ತೆಯಾದ ಚೀಲ ಎಂಬುದನ್ನು ಖಚಿತಪಡಿಸುತ್ತದೆ.

ಆದರೆ, ಮುಂಬೈನ ಈ ಸಿಮೆಂಟ್ ಚೀಲಕ್ಕೂ, ಅಮೆರಿಕಾದ ಹಾಸ್ಯ ನಟ ಜೆರ್ರಿ ಸೇನ್ ಫೀಲ್ಡ್ ಚಿತ್ರಕ್ಕೂ ಎತ್ತಣದಿಂದೆತ್ತಣ ಸಂಬಂಧ ಎನ್ನುವಂತಾಗಿದೆ. 80 ರ ದಶಕದಲ್ಲಿ ಸೇನ್ ಫೀಲ್ಡ್ ಶೋ ನೋಡಿ ನಕ್ಕಿದ್ದವರೆಲ್ಲ ಟ್ವಿಟ್ಟರ್ ನ ಈ ಪೋಸ್ಟ್ ಕಂಡು ಇನ್ನಷ್ಟು ಕುತೂಹಲಿಗಳಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...