alex Certify ಈ ʼಬಿಗ್ ‌ಬಿʼ ಫ್ಯಾನ್‌ ಬಳಿ ಇವೆ 7000 ಫೋಟೋಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ʼಬಿಗ್ ‌ಬಿʼ ಫ್ಯಾನ್‌ ಬಳಿ ಇವೆ 7000 ಫೋಟೋಗಳು…!

ಬಾಲಿವುಡ್‌ನ ದೊಡ್ಡ ನಟರಲ್ಲಿ ಒಬ್ಬರಾದ ಅಮಿತಾಭ್‌ ಬಚ್ಚನ್‌ಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಭಾನುವಾರ ತಮ್ಮ 78ನೇ ವಸಂತಕ್ಕೆ ಕಾಲಿಟ್ಟ ಅಮಿತಾಭ್ ‌ಗೆ ದೇಶದ ಮೂಲೆ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಸೂರತ್‌ ನ ದಿವ್ಯೇಶ್ ಕುಮಾರ್‌ ಹೆಸರಿನ ಬಿಗ್ ‌ಬಿ ಅಭಿಮಾನಿಯೊಬ್ಬರು ಕಳೆದ 21 ವರ್ಷಗಳಿಂದ ತಮ್ಮ ಮೆಚ್ಚಿನ ನಟದ ಥರಾವರಿ ಪೋಸ್ಟರ್‌ಗಳು ಹಾಗೂ ಚಿತ್ರಗಳನ್ನು ಸಂಗ್ರಹಿಸಿಕೊಂಡು ಬಂದಿದ್ದಾರೆ. ಇದುವರೆಗೂ ಬಿಗ್‌ ಬಿ ರ 7000ಕ್ಕೂ ಹೆಚ್ಚಿನ ಚಿತ್ರಗಳನ್ನು ಸಂಗ್ರಹಿಸಿದ್ದಾರೆ ದಿವ್ಯೇಶ್.

ಇದುವರೆಗೂ 10 ಬಾರಿ ಬಿಗ್ ‌ಬಿ ರನ್ನು ಭೇಟಿ ಮಾಡಿರುವ ದಿವ್ಯೇಶ್‌, ಅವರ ಒಂದು ಚಿತ್ರ ಹಾಗೂ ಮೊಮ್ಮಗಳು ಆರಾಧ್ಯಳಿಗೆ ಆಟವಾಡಲು ಆಟದ ಸಾಮಾನೊಂದನ್ನು ಕೊಟ್ಟಿದ್ದಾರೆ. ಪ್ರತಿ ವರ್ಷ ಬಿಗ್ ‌ಬಿ ಜನ್ಮದಿನದಂದು 11 ಸಸಿಗಳನ್ನು ನೆಡುವ ಅಭ್ಯಾಸವನ್ನೂ ಇಟ್ಟುಕೊಂಡಿದ್ದಾರಂತೆ ದಿವ್ಯೇಶ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...