alex Certify ‘ಯುಟ್ಯೂಬ್‌’ಗೂ ಮುನ್ನ ವೈರಲ್‌ ಆಗಿದ್ದವು ಈ ವಿಡಿಯೋಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಯುಟ್ಯೂಬ್‌’ಗೂ ಮುನ್ನ ವೈರಲ್‌ ಆಗಿದ್ದವು ಈ ವಿಡಿಯೋಗಳು

ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋ ವೈರಲ್ ಆಗುವುದು ಸರ್ವೇ ಸಾಮಾನ್ಯ. ಶೈಕ್ಷಣಿಕ, ಮನರಂಜನೆ, ಮೋಜು…..ಹೀಗೆ ಯಾವುದೇ ವಿಚಾರದ ಬಗ್ಗೆ ವಿಡಿಯೋ ಬೇಕೆಂದಲ್ಲಿ ಬೆರಳ ತುದಿಯಲ್ಲೇ ಸಾಕಷ್ಟು ಕಂಟೆಂಟ್‌ ಕೊಟ್ಟುಬಿಡುತ್ತದೆ ಯೂಟ್ಯೂಬ್. ಆದರೆ ಯೂಟ್ಯೂಬ್‌ಗೂ ಮುಂಚೆ ಹೇಗಿತ್ತು ಎಂದು ಯೋಚಿಸಿದ್ದೀರಾ?

ಯೂಟ್ಯೂಬ್‌ ಆಗಮನಕ್ಕೂ ಮುನ್ನವೂ ಜನರು ವಿಡಿಯೋಗಳನ್ನು ಮಾಡುತ್ತಿದ್ದರು ಹಾಗೂ ಅವುಗಳಲ್ಲಿ ಹಲವಾರು ವಿಡಿಯೋಗಳು ವೈರಲ್ ಸಹ ಆಗಿಬಿಡುತ್ತಿದ್ದವು. ಸಾಮಾಜಿಕ ಜಾಲತಾಣಕ್ಕೂ ಮುನ್ನ ವೈರಲ್ ಆಗಿದ್ದ ಏಳು ವಿಡಿಯೋಗಳ ಪಟ್ಟಿ ಇಲ್ಲಿದೆ:

ಡ್ಯಾನ್ಸಿಂಗ್ ಬೇಬಿ (1996)

ಡೈಪರ್‌ಧಾರಿ ಮಗುವೊಂದು ಸ್ವೀಡಿಶ್ ರಾಕ್ ಹಾಡಿಗೆ ಸ್ಟೆಪ್ ಹಾಕುತ್ತಿರುವ 3ಡಿ ಅನಿಮೇಷನ್ ಬೇಬಿ ಒಂದರ ನೃತ್ಯವು 1990ರ ದಶಕದಲ್ಲಿ ಸಖತ್‌ ಸದ್ದು ಮಾಡಿತ್ತು. ಊಗಚಾಕ ಬೇಬಿ ಎಂದೂ ಸಹ ಕರೆಯಲಾದ ಡ್ಯಾನ್ಸಿಂಗ್ ಬೇಬಿ ಇ-ಮೇಲ್ ಸರಣಿ ಸಂದೇಶಗಳ ಮೂಲಕ ಜಗತ್ತಿನಾದ್ಯಂತ ವೈರಲ್ ಆಗಿತ್ತು.

130 ಮಿಲಿಯನ್ ವೀಕ್ಷಣೆ ಪಡೆದ ʼರ‍್ಯಾಂಬೊ 2ʼ ಚಿತ್ರದ ಚುಟುಚುಟು ಹಾಡು

ಆಲ್ ಯುವರ‍್ ಬೇಸ್ ಬಿಲಾಂಗ್ ಟು ಅಸ್ (1998)

ವಿಡಿಯೋ ಗೇಮ್ ಪಾತ್ರವೊಂದರ ದೋಷಪೂರಿತ ವ್ಯಾಕರಣವು ಭಾರೀ ವಿನೋದದ ಸರಕಾಗಿ ಜಗತ್ತಿನಾದ್ಯಂತ ಜನರನ್ನು ನಗೆಗಡಲಲ್ಲಿ ತೇಲಿಸಿತ್ತು. ಜೀರೋ ವಿಂಗ್ ಹೆಸರಿನ ಗೇಮ್‌ನಿಂದ ಈ ರೊಬಾಟಿಕ್ ಶಬ್ದವನ್ನು ತೆಗೆದುಕೊಳ್ಳಲಾಗಿದೆ. ಸಮ್‌ಥಿಂಗ್ ಆಫುಲ್ ಅಂಡ್ ನ್ಯೂಗ್ರೌಂಡ್ಸ್‌ನಂಥ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡ ಬಳಿಕ ಈ ವಿಡಿಯೋ 2000ದ ದಶಕದಲ್ಲಿ ಬಲೇ ವೈರಲ್ ಆಗಿತ್ತು.

ಪೀನಟ್ ಬಟರ್‌ ಜೆಲ್ಲಿ (2002)

ಬಕ್ವೀಟ್ ಬಾಯ್ಸ್‌ ಹಾಡಿಗೆ ಸ್ಟೆಪ್ ಹಾಕುವ ಬಾಳೇಹಣ್ಣಿನ ಅನಿಮೇಷನ್ ಪಾತ್ರವೊಂದು ಆಫ್‌ಟಾಪಿಕ್ ಎಂಬ ಅಂತಜಾರ್ಲದ ಫೋರಂ ಒಂದರಲ್ಲಿ ಜನಪ್ರಿಯವಾಗಿತ್ತು. ಈ ವಿಡಿಯೋವನ್ನು ರ‍್ಯಾನ್ ಎಟ್ರಾಟಾ ಕ್ರಿಯೇಟ್ ಮಾಡಿದ್ದರು.

ಸ್ಟಾರ್‌ ವಾರ‍್ಸ್‌ ಕಿಡ್ (2003)

ಸ್ಟಾರ್‌ ವಾರ‍್ಸ್‌ ಪೈಟ್‌ನಲ್ಲಿ ನಟಿಸಿದ ಟೀನೇಜರ್‌ ಒಬ್ಬ ಈ ವಿಡಿಯೋ ಮೂಲಕ ಸದ್ದು ಮಾಡಿದ್ದ. ಕಝಾ ಎಂಬ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದ ಈ ವಿಡಿಯೋ ಕಾಳ್ಗಿಚ್ಚಿನಂತೆ ಹಬ್ಬಿ ಶತಕೋಟಿಗೂ ಹೆಚ್ಚು ವೀವ್ಸ್‌ ಗಿಟ್ಟಿಸಿತ್ತು ಎಂದು ಅಂದಾಜಿಸಲಾಗಿದೆ.

ಹಣದಿಂದ ಸಂತೋಷ ಖರೀದಿಸಬಹುದಂತೆ…! ಹೊಸ ಅಧ್ಯಯನದಿಂದ ಬಯಲಾಯ್ತು ಕುತೂಹಲಕಾರಿ ಮಾಹಿತಿ

ಬ್ಯಾಡ್ಜರ್‌ ಬ್ಯಾಡ್ಜರ್‌ ಬ್ಯಾಡ್ಜರ್‌ (2003)

ವೀಬಲ್ಸ್‌-ಸ್ಟಫ್‌.ಕಾಮ್‌ನಲ್ಲಿ ಮೊದಲಿಗೆ ಕಾಣಿಸಿಕೊಂಡ ಈ ಫ್ಲಾಶ್ ಅನಿಮೇಷನ್ ಕಾರ್ಟೂನ್‌ನಲ್ಲಿ ಬ್ಯಾಡ್ಜರ್‌ಗಳು, ಮಶ್ರೂಂಗಳು ಸೆರಿದಂತೆ ಅನೇಕ ಪಾತ್ರಗಳಿದ್ದು, ’ಬ್ಯಾಡ್ಜರ್‌’ ಪದವನ್ನು ಪದೇ ಪದೇ ಪುನರಾವರ್ತಿಸುವ ಕಾರಣ ವಿಡಿಯೋಗೆ ಅದೇ ಹೆಸರು ಬಂದಿದೆ.

ನೂಮಾ ನೂಮಾ (2004)

ಮಾಲ್ಡೋವಾದ ಉತ್ಸಾಹೀ ಪಾಪ್‌ ಮ್ಯೂಸಿಕ್ ವಿಡಿಯೋವೊಂದಕ್ಕೆ ಲಿಪ್ ಸಿಂಕಿಂಗ್ ಮಾಡಿಕೊಂಡು ಡ್ಯಾನ್ಸ್ ಮಾಡಿರುವ ಅಭಿಮಾನಿಯೊಬ್ಬನ ವಿಡಿಯೋ ಇದು. ನ್ಯೂಗ್ರೌಂಡ್ಸ್ ಎಂಬ ಮನರಂಜನೆಯ ಜಾಲತಾಣದಲ್ಲಿ ಈತ ಈ ವಿಡಿಯೋ ಅಪ್ಲೋಡ್ ಮಾಡಿದ್ದ.

ಡಿ ಲಾಮಾ ಸಾಂಗ್ (2004)

ಲಾಮಾಗಳ ಮೇಲೆ ಇದ್ದ ವಿಚಿತ್ರ ಹಾಡೊಂದರ ವಿಡಿಯೋವನ್ನು ಡೆವಿಯಾನ್‌ಆರ್ಟ್ ಅಪ್ಲೋಡ್ ಮಾಡಿತ್ತು. ಹಾಡಿನಲ್ಲಿ ’ಲಾಮಾ’ ಎಂಬ ಶಬ್ದದ ಉಚ್ಛಾರಣೆ ಆದಾಗೆಲ್ಲಾ ಲಾಮಾದ ಚಿತ್ರಗಳು ಕಾಣಿಸಿಕೊಳ್ಳುತ್ತಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...