alex Certify ‌ʼಸಾಜನ್ʼ ಚಿತ್ರದಲ್ಲಿ ನಟಿಸಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಮಾಧುರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಸಾಜನ್ʼ ಚಿತ್ರದಲ್ಲಿ ನಟಿಸಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಮಾಧುರಿ

ಬಾಲಿವುಡ್‌ನ ಆಲ್‌ ಟೈಮ್ ಹಿಟ್ ‌ಗಳಲ್ಲಿ ಒಂದಾದ ’ಸಾಜನ್’ ಚಿತ್ರ ಬಿಡುಗಡೆಯಾಗಿ 29 ವಸಂತಗಳು ಮುಗಿದಿವೆ. ಇದೇ ವೇಳೆ ಆ ಚಿತ್ರದಲ್ಲಿ ನಟಿಸಿದ್ದ ನಟಿ ಮಾಧುರಿ ದೀಕ್ಷಿತ್‌ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಥ್ರೋ ಬ್ಯಾಕ್ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

#29YearsOfSaajan ಟ್ಯಾಗ್‌ನಲ್ಲಿ ಸಲ್ಮಾನ್ ಖಾನ್ ಹಾಗೂ ಸಂಜಯ್‌ ದತ್‌ ಜೊತೆಗೆ ಚಿತ್ರದ ಸೀನ್‌ ಒಂದರಲ್ಲಿ ತಾವು ನಿಂತಿರುವ ಚಿತ್ರವೊಂದನ್ನು ಶೇ‌ರ್‌ ಮಾಡಿಕೊಂಡ ಮಾಧುರಿ, “ಚಿತ್ರದ ಸ್ಕ್ರಿಪ್ಟ್‌ ಓದಿದ ಕೂಡಲೇ ಅದರ ಭಾಗವಾಗಿ ಇರಲು ಮನಸ್ಸಾಯಿತು. ಕಥೆ ರೊಮ್ಯಾಂಟಿಕ್‌ ಆಗಿತ್ತಲ್ಲದೇ ಡೈಲಾಗ್‌ಗಳು ಬಹಳ ಕವನಾತ್ಮಕವಾಗಿದ್ದವು, ಸಂಗೀತವೂ ಸಹ ಅದ್ಭುತವಾಗಿತ್ತು” ಎಂದು ಹೇಳಿಕೊಂಡಿದ್ದಾರೆ.

ಅತ್ಯಂತ ವಿವಾದಾತ್ಮಕ ನಟರಾದ ಸಲ್ಮಾನ್ ಖಾನ್ ಹಾಗೂ ಸಂಜತ್‌ ದತ್‌ರನ್ನು ಮುಂಚೂಣಿ ಪಾತ್ರಗಳಲ್ಲಿ ಹೊಂದಿರುವ ಈ ಚಿತ್ರವು ತ್ರಿಕೋನ ಪ್ರೇಮಕಥೆಯ ಎಳೆಯ ಮೇಲೆ ಮಾಡಿದ್ದಾಗಿದೆ. 1991ರ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಿತ್ರವಾದ ಸಾಜನ್ ಹಾಡುಗಳು ಈಗಲೂ ಫೇಮಸ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...