alex Certify ಸ್ಥಗಿತಗೊಳ್ಳಲಿದೆಯಾ ‘ಕಲರ್ಸ್ ಸೂಪರ್’ ಚಾನೆಲ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಥಗಿತಗೊಳ್ಳಲಿದೆಯಾ ‘ಕಲರ್ಸ್ ಸೂಪರ್’ ಚಾನೆಲ್…?

ವೀಕ್ಷಕರ ಮನ ಗೆದ್ದಿದ್ದ ಕಲರ್ಸ್ ಸೂಪರ್ ಚಾನೆಲ್ ಸ್ಥಗಿತಗೊಳ್ಳಲಿದೆ ಎಂಬ ವದಂತಿ ಹರಿದಾಡುತ್ತಿದೆ. ಈ ಕುರಿತು ಇದೀಗ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರಿನ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಸ್ಪಷ್ಟನೆ ನೀಡಿದ್ದಾರೆ.

ಕಲರ್ಸ್ ಸೂಪರ್ ಚಾನೆಲ್ ಸ್ಥಗಿತಗೊಂಡಿಲ್ಲ. ಕೆಲ ಕಾರಣಗಳಿಂದಾಗಿ 4 ಧಾರಾವಾಹಿಗಳನ್ನು ನಿಲ್ಲಿಸಿದ್ದು, ಸದ್ಯಕ್ಕೆ ಹಳೆಯ ಕಾರ್ಯಕ್ರಮಗಳೇ ವಾಹಿನಿಯಲ್ಲಿ ರಿಪೀಟ್ ಆಗುತ್ತಿವೆ ಎಂದು ಹೇಳಿದ್ದಾರೆ.

ಸ್ಥಗಿತಗೊಂಡಿರುವ 4 ಧಾರಾವಾಹಿಗಳನ್ನು ಮುಂದುವರೆಸುವ ಸಾಧ್ಯತೆ ಇಲ್ಲ ಎಂದು ಹೇಳಿರುವ ಅವರು, ಸೆಪ್ಟೆಂಬರ್ ನಿಂದ ಹೊಸ ರೂಪದಲ್ಲಿ ಕಲರ್ಸ್ ಸೂಪರ್ ಚಾನೆಲ್ ಪ್ರಸಾರವಾಗಲಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...