alex Certify ಸುಶಾಂತ್ ಮನೆಯಿಂದ ರಿಯಾ ಮನೆಗೆ ಕೊರಿಯರ್ ಆಗಿತ್ತು ಡ್ರಗ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಮನೆಯಿಂದ ರಿಯಾ ಮನೆಗೆ ಕೊರಿಯರ್ ಆಗಿತ್ತು ಡ್ರಗ್ಸ್

सुशांत स‍िंह राजपूत

ರಿಯಾ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದ್ದು, ರಿಯಾಗೆ ಜೈಲೇ ಗತಿಯಾಗಿದೆ. ಈ ಮಧ್ಯೆ ಡ್ರಗ್ಸ್ ವಿಷ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷ್ಯ ಹೊರ ಬಿದ್ದಿದೆ. ಲಾಕ್ ಡೌನ್ ಸಮಯದಲ್ಲಿ ಸುಶಾಂತ್ ಮನೆಯಿಂದ ರಿಯಾ ಮನೆಗೆ ಡ್ರಗ್ಸ್ ಪಾರ್ಸಲ್ ಮಾಡಲಾಗಿತ್ತಂತೆ.

ದೀಪೇಶ್ ಸಾವಂತ್, ಸುಶಾಂತ್ ಮನೆಯಿಂದ ಕೊರಿಯರ್ ನೀಡಿದ್ದರಂತೆ. ಶೋವಿಕ್, ರಿಯಾ ಮನೆಯಲ್ಲಿ ಕೊರಿಯರ್ ಸ್ವೀಕರಿಸಿದ್ದರಂತೆ. ಅರ್ಧ ಕೆ.ಜಿ ಡ್ರಗ್ಸ್ ಇದ್ರಲ್ಲಿತ್ತು ಎನ್ನಲಾಗಿದೆ. ಕೊರಿಯರ್ ಬಾಯ್ ಗೆ ಇದು ತಿಳಿಯದಿರಲಿ ಎನ್ನುವ ಕಾರಣಕ್ಕೆ ಮನೆಯ ಕೆಲ ಸಾಮಾನುಗಳನ್ನು ಕೊರಿಯರ್ ಮಾಡಿದ್ದರಂತೆ. ಏಪ್ರಿಲ್ ನಲ್ಲಿ ಈ ಕೋರಿಯರ್ ಕಳುಹಿಸಲಾಗಿದೆ.

ಕೊರಿಯರ್ ಹುಡುಗ ದೀಪೇಶ್ ಹಾಗೂ ಶೋವಿಕ್ ರನ್ನು ಗುರುತಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗ್ತಿದೆ. ಮೂಲಗಳ ಪ್ರಕಾರ, ಲಾಕ್ ಡೌನ್ ಸಂದರ್ಭದಲ್ಲಿ ಸುಶಾಂತ್, ರಿಯಾ ಮನೆಯಲ್ಲಿದ್ದರು. ಹಾಗಾಗಿ ರಿಯಾ ಮನೆಗೆ ಕೊರಿಯರ್ ಕಳುಹಿಸಲಾಗಿತ್ತು ಎನ್ನಲಾಗ್ತಿದೆ.

ಈ ಮಧ್ಯೆ ಬಾಲಿವುಡ್ ನ 15 ಮಂದಿ ಹೆಸರನ್ನು ರಿಯಾ ಹೇಳಿದ್ದಾಳೆ ಎನ್ನಲಾಗಿದೆ. ವಿಚಾರಣೆ ವೇಳೆ ಎನ್ ಸಿ ಬಿಗೆ ರಿಯಾ ಮಾಹಿತಿ ನೀಡಿದ್ದು, ಇದ್ರ ಬಗ್ಗೆ ವಿಚಾರಣೆ ನಡೆಯುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...