alex Certify ಸುಶಾಂತ್ ಜೊತೆ ಈ ಕೆಲಸ ಮಾಡ್ತಿದ್ದೆ ಎಂದ ಸಾರಾ ಅಲಿಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ಜೊತೆ ಈ ಕೆಲಸ ಮಾಡ್ತಿದ್ದೆ ಎಂದ ಸಾರಾ ಅಲಿಖಾನ್

ಎನ್‌ಸಿಬಿಯ ವಿಚಾರಣೆ ವೇಳೆ ನಟಿ ಸಾರಾ ಅಲಿ ಖಾನ್ ಡ್ರಗ್ಸ್ ತೆಗೆದುಕೊಳ್ಳುವುದನ್ನು ನಿರಾಕರಿಸಿದ್ದಾರೆ. ಶ್ರದ್ಧಾ ಕಪೂರ್ ಅವರಂತೆಯೇ ಸಾರಾ ಕೂಡ ಡ್ರಗ್ಸ್ ವಿವಾದದಿಂದ ದೂರವಿರಲು  ಪ್ರಯತ್ನಿಸಿದ್ದಾರೆ. ಸಾರಾಗೆ ಎನ್.ಸಿ.ಬಿ. ಅನೇಕ ಪ್ರಶ್ನೆಗಳನ್ನು ಕೇಳಿದೆ. ಆದ್ರೆ ಸಾರಾ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದಿದ್ದಾರೆ. ತಾನು ಎಂದಿಗೂ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ಸಾರಾ ಹೇಳಿದ್ದಾರೆ.

ಡ್ರಗ್ಸ್ ವಿವಾದದಿಂದ ದೂರವಿರಲು ಪ್ರಯತ್ನಿಸಿರುವ ಸಾರಾ, ಧೂಮಪಾನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಕೇದಾರನಾಥ ಸಿನಿಮಾ ಚಿತ್ರೀಕರಣದ ವೇಳೆ ಸುಶಾಂತ್ ಸಿಂಗ್ ರಜಪೂತ್ ಹತ್ತಿರವಾಗಿದ್ದರಂತೆ. ಇಬ್ಬರ ಬಾಂಧವ್ಯ ಉತ್ತಮವಾಗಿತ್ತಂತೆ. ಇಬ್ಬರೂ ಒಟ್ಟಿಗೆ ಧೂಮಪಾನ ಮಾಡುತ್ತಿದ್ದರಂತೆ.

ಸಾರಾ, ಸುಶಾಂತ್ ಅವರೊಂದಿಗೆ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ರಿಯಾ ಚಕ್ರವರ್ತಿ ಹೇಳಿದ್ದರು. ರಿಯಾ ಅವರ ಆರೋಪದ ನಂತರವೇ ಸಾರಾ ವಿಚಾರಣೆ ನಡೆದಿದೆ. ಸುಶಾಂತ್ ತೋಟದ ಮನೆಗೆ ಸಾರಾ ಆಗಾಗ ಬರ್ತಿದ್ದರು. ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಅಲ್ಲಿನ ಕೆಲಸಗಾರ ಹೇಳಿದ್ದರು. ಎನ್.ಸಿ.ಬಿ. ಪ್ರಶ್ನೆಗೆ ಉತ್ತರ ನೀಡಿದ ಸಾರಾ, ಪಾರ್ಟಿಯಲ್ಲಿ ಪಾಲ್ಗೊಳ್ಳುವುದನ್ನು ಒಪ್ಪಿಕೊಂಡಿದ್ದಾರೆ. ಆದ್ರೆ ಡ್ರಗ್ಸ್ ಸೇವನೆ ಬಗ್ಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...