alex Certify ವೆಬ್ ಸರಣಿ ನಿರ್ಮಿಸಿದ ಅನುಷ್ಕಾ ಶರ್ಮಾಗೆ ಎದುರಾಯ್ತು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಬ್ ಸರಣಿ ನಿರ್ಮಿಸಿದ ಅನುಷ್ಕಾ ಶರ್ಮಾಗೆ ಎದುರಾಯ್ತು ಸಂಕಷ್ಟ

ಸದ್ಯ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವೆಬ್ ಸರಣಿ ಮೂಲಕ ಸುದ್ದಿಯಲ್ಲಿದ್ದಾರೆ. ಅನುಷ್ಕಾರ ಪಾತಾಳ ಲೋಕ್ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ಸುದ್ದಿಯಾಗ್ತಿದೆ. ಆದ್ರೆ ಇದೇ ಕಾರಣಕ್ಕೆ ಅನುಷ್ಕಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದ್ರಲ್ಲಿ ಜಾತಿಗೆ ಸಂಬಂಧಿಸಿ ಪದ ಬಳಕೆ ಮಾಡಲಾಗಿದೆ. ಹಾಗಾಗಿ ಪಾತಾಳ ಲೋಕ್ ವಿರುದ್ಧ ನೊಟೀಸ್ ಜಾರಿಯಾಗಿದೆ. ವಿರೇನ್ ಸಿಂಗ್ ಗುರುಂಗ್, ಸರಣಿಯ ನಿರ್ಮಾಪಕಿ ಅನುಷ್ಕಾ ಶರ್ಮಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಗುರುಂಗ್ ಮೇ 18 ರಂದು ಕಳುಹಿಸಿದ ಈ ನೋಟಿಸ್ ನಕಲನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈ ವೆಬ್ ಸರಣಿಯಲ್ಲಿ ಬಳಸಿದ ಪದ ನೇಪಾಳಿ ಸಮುದಾಯವನ್ನು ಅವಮಾನಗೊಳಿಸಿದೆ ಎಂದಿದ್ದಾರೆ. ಮೊದಲ ಸರಣಿಯ ಎರಡನೇ ಎಪಿಸೋಡ್ ನಲ್ಲಿ 3 ನಿಮಿಷದ 41ನೇ ಸೆಕೆಂಡ್ ನಲ್ಲಿ ಅದನ್ನು ಬಳಸಲಾಗಿದೆ ಎಂದು ಅವ್ರು ದೂರಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...