alex Certify ‘ರಾಬರ್ಟ್’ ಚಿತ್ರದ ರಾ ರಾ ರಾ ನೇನ್ ರೆಡಿ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಬರ್ಟ್’ ಚಿತ್ರದ ರಾ ರಾ ರಾ ನೇನ್ ರೆಡಿ ರಿಲೀಸ್

ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಂತಸದ ದಿನವಾಗಿದೆ. ದರ್ಶನ್ ಅವರ ಮೊದಲ ಸಿನಿಮಾ ‘ಮೆಜೆಸ್ಟಿಕ್’ ಇಂದು ಬಿಡುಗಡೆಯಾದ ದಿನವಾದರೆ ಇನ್ನೊಂದೆಡೆ ದರ್ಶನ್ ಅವರ ಬಹುನಿರೀಕ್ಷೆಯ ‘ರಾಬರ್ಟ್’ ಚಿತ್ರದ ತೆಲುಗು ವರ್ಷನ್ ಲಿರಿಕಲ್ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದ್ದಾರೆ.

ಫೆಬ್ರವರಿ 14ರಂದು ದಾವಣಗೆರೆಯಲ್ಲಿ ‘ಪೊಗರು’ ಚಿತ್ರದ ಆಡಿಯೋ ಲಾಂಚ್

ಕನ್ನಡದಲ್ಲಿ ‘ಬಾ ಬಾ ಬಾ ನಾ ರೆಡಿ’ ಹಾಡು ಈಗಾಗಲೇ 16 ಮಿಲಿಯನ್ ವೀಕ್ಷಣೆ ಪಡೆದು ಭರ್ಜರಿಯಾಗಿ ಮುನ್ನುಗ್ಗುತ್ತಲೇ ಇದೆ. ಇಂದು ತೆಲುಗಿನಲ್ಲಿ ಬಿಡುಗಡೆಯಾಗಿರುವ ರಾ ರಾ ನೇನ್ ರೆಡಿ ಎಂಬ ಈ ಹಾಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ ಕನ್ನಡ ಹಾಡು ಕೇಳಿದಂತೆ ಆಗುತ್ತಿದೆ ಸೂಪರ್ ವಾಯ್ಸ್ ಎಂದು ಕಮೆಂಟ್ಸ್ ಮಾಡಿದ್ದಾರೆ. ಈ ಹಾಡು ರಿಲೀಸ್ ಆದ 50 ನಿಮಿಷದಲ್ಲಿ 1 ಲಕ್ಷ ವೀಕ್ಷಣೆ ಹಾಗೂ 24 ಸಾವಿರ ಲೈಕ್ಸ್ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...