alex Certify ಮೇಘನಾ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ, ಪುಟ್ಟ ಮಗು ಸೇರಿ ಎಲ್ಲರಿಗೂ ಕೊರೋನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಘನಾ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ, ಪುಟ್ಟ ಮಗು ಸೇರಿ ಎಲ್ಲರಿಗೂ ಕೊರೋನಾ

ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೆ ಚಿರು ಸಾವಿಗೀಡಾಗಿದ್ದು, ಸರ್ಜಾ ಕುಟುಂಬಕ್ಕೆ ದೊಡ್ಡ ಆಘಾತವಾಗಿತ್ತು. ಹೇಗೋ ಚಿರು ನೆನಪಲ್ಲೇ ಇದ್ದ ಕುಟುಂಬ ಪುಟ್ಟ ಚಿರುವಾಗಿ ಮನೆಗೆ ಬಂದಿದ್ದಾನೆ ಅಂದುಕೊಂಡು ಖುಷಿಯಲ್ಲಿದ್ದ ಕುಟುಂಬಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.

ಹೌದು, ನಟಿ ಮೇಘನಾ ಸರ್ಜಾಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಬದುಕಿನಲ್ಲಿ ಇದೀಗ ಮತ್ತೆ ಹೋರಾಡುವ ಪರಿಸ್ಥಿತಿ ಬಂದಿದೆ. ಮಹಾಮಾರಿ ಕೊರೊನಾ ಸೋಂಕು ಇದೀಗ ಮೇಘನಾ ಕುಟುಂಬಕ್ಕೆ ಆವರಿಸಿಕೊಂಡಿದಲ್ಲದೇ, ಇತ್ತೀಚೆಗೆ ಹುಟ್ಟಿದ ಮೇಘನಾ-ಚಿರು ಮಗುವಿಗೂ ಕೊರೊನಾ ಸೋಂಕು ತಗುಲಿದೆ.

ಹೌದು, ನಿನ್ನೆಯಷ್ಟೆ ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಸುಂದರ್ ರಾಜ್‌ಗೆ ಸೋಂಕು ಇರುವುದು ದೃಢವಾಗಿತ್ತು. ಇದೀಗ ಮೇಘನಾ ಸರ್ಜಾ ಹಾಗು ಮಗುವಿಗೂ ಕೊರೊನಾ ಸೋಂಕು ತಗುಲಿದೆ. ಸುಂದರ್ ರಾಜ್ ಹಾಗು ಪ್ರಮಿಳಾ ಜೋಷಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರೆ, ಮೇಘನಾ ಹಾಗೂ ಅವರ ಮಗು ಹೋಂ ಕ್ವಾರೆಂಟೈನ್‌ನಲ್ಲಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...