alex Certify ಮದುವೆಯಾಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಪೂನಂ ಪಾಂಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಪೂನಂ ಪಾಂಡೆ

ನಟಿ ಪೂನಂ ಪಾಂಡೆ ಅಭಿಮಾನಿಗಳಿಗೆ ಶಾಕ್ ನೀಡಿದ್ದಾಳೆ. ನಟಿ ಸ್ಯಾಮ್ ಬಾಂಬೆ ಜೊತೆ ಮುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋಗಳನ್ನು ಪೂನಂ ಪಾಂಡೆ ಹಂಚಿಕೊಂಡಿದ್ದಾಳೆ.

ಕೆಲ ಫೋಟೋಗಳು ಮೆಹಂದಿ ಕಾರ್ಯಕ್ರಮದ್ದಾದ್ರೆ ಮತ್ತೆ ಕೆಲ ಫೋಟೋಗಳು ಮದುವೆ ಸಮಾರಂಭದ್ದಾಗಿದೆ. ಎಲ್ಲ ಫೋಟೋಗಳು ಅಭಿಮಾನಿಗಳನ್ನು ಸೆಳೆದಿದೆ. ಗುರುವಾರ ಮುಂಬೈನಲ್ಲಿ ಪೂನಂ ಪಾಂಡೆ ಗೆಳೆಯ ಸ್ಯಾಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿಮ್ಮ ಜೊತೆ ಏಳು ಜನ್ಮ ಕಳೆಯುವ ನಿರೀಕ್ಷೆಯಿದೆ ಎಂದು ಪೂನಂ ಫೋಟೋಕ್ಕೆ ಶೀರ್ಷಿಕೆ ಹಾಕಿದ್ದಾಳೆ. ಇದಕ್ಕೆ ಸ್ಯಾಮ್ ಪ್ರತಿಕ್ರಿಯೆ ಕೂಡ ನೀಡಿದ್ದಾನೆ. ಕೆಲ ದಿನಗಳ ಹಿಂದೆ ಪೂನಂ, ಸ್ಯಾಮ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಎರಡು ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿತ್ತು. ಮದುವೆ ಫೋಟೋ ಪೋಸ್ಟ್ ಆಗ್ತಿದ್ದಂತೆ ಅಭಿಮಾನಿಗಳು ಜೋಡಿಗೆ ಶುಭ ಹಾರೈಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಪೂನಂ ಪಾಂಡೆ. ಸದಾ ಸೆಕ್ಸಿ ಫೋಟೋ, ವಿಡಿಯೋ ಮೂಲಕ ಅಭಿಮಾನಿಗಳ ನಿದ್ರೆಗೆಡಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...