alex Certify ಮತ್ತೆ ಬೀದಿಗೆ ಬಿದ್ರಾ ಗಾಯಕಿ ರಾನು ಮೊಂಡಲ್….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಬೀದಿಗೆ ಬಿದ್ರಾ ಗಾಯಕಿ ರಾನು ಮೊಂಡಲ್….?

ರೈಲ್ವೇ ಪ್ಲಾಟ್‌ಫಾರಂನಲ್ಲಿ ಕುಳಿತು ಹಾಡು ಹೇಳುತ್ತಿದ್ದ ಗಾಯಕಿ ರಾನು ಮೊಂಡಲ್ ರಾತ್ರೋರಾತ್ರಿ ಸ್ಟಾರ್ ಆಗಿದ್ದು ಗೊತ್ತೇ ಇದೆ. ಸೋಶಿಯಲ್ ಮೀಡಿಯಾದ ಮೂಲಕ ಇಡೀ ಸಂಗೀತ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ಈ ಗಾಯಕಿಯ ಬದುಕು ಒಂದೇ ದಿನದಲ್ಲಿ ಉತ್ತಂಗಕ್ಕೆ ಏರಿತ್ತು. ಆದರೆ ಇದೀಗ ರಾನು ಬೀದಿಗೆ ಬೀಳುವ ಪರಿಸ್ಥಿತಿ ಬಂದೊದಗಿದೆ.

ಹೌದು, ಕೊರೊನಾ ಅನ್ನೋ ವೈರಸ್ ಎಲ್ಲರ ಜೀವನವನ್ನು ಕಿತ್ತುಕೊಳ್ಳುತ್ತಿದೆ. ಅನೇಕರು ಕೈಯಲ್ಲಿದ್ದ ಕೆಲಸವನ್ನು ಕಳೆದುಕೊಂಡು ಉಪವಾಸ ಇರುವ ಸ್ಥಿತಿ ಬಂದಿದೆ. ಇದಕ್ಕೆ ರಾನು ಮೊಂಡಲ್ ಕೂಡ ಹೊರತಾಗಿಲ್ಲ. ಅಷ್ಟೆಲ್ಲ ಹೆಸರು ಮಾಡಿದ್ದ ರಾನುಗೆ ಇದೀಗ ಅವಕಾಶಗಳೇ ಇಲ್ಲದಂತಾಗಿದೆ.

ಯಾವುದೇ ಕಾರ್ಯಕ್ರಮಗಳು ಇಲ್ಲದೇ ಇರೋದ್ರಿಂದ ಮನೆಯಲ್ಲಿಯೇ ಇರುವ ಪರಿಸ್ಥಿತಿ ಬಂದಿದೆ. ಮುಂಬೈನ ಸಂಬಂಧಿಯೊಬ್ಬರ ಮನೆಯಲ್ಲಿ ರಾನು ಜೀವನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅತ್ತ ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ರಾನುಗೆ ಇದೀಗ ಹಣವಿಲ್ಲದೇ ಜೀವನ ಕಷ್ಟಕರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...