alex Certify ಬಾಲಿವುಡ್ ನಟ ಸಲ್ಮಾನ್ ಖಾನ್ ಫಿಟ್ ನೆಸ್ ರಹಸ್ಯವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ನಟ ಸಲ್ಮಾನ್ ಖಾನ್ ಫಿಟ್ ನೆಸ್ ರಹಸ್ಯವೇನು ಗೊತ್ತಾ….?

ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಅವರನ್ನು ನೋಡಿದರೆ ಅವರಿಗೆ 55 ವರ್ಷ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ! ಅಂತಹ ಫಿಟ್ ಆದ ದೇಹ ಸೌಂದರ್ಯವನ್ನು ಹೊಂದಿದ್ದಾರೆ. ಇದಕ್ಕೆ ಜೀವನ ಶೈಲಿ ಮತ್ತು ಆಹಾರ ಕ್ರಮಗಳೇ ಕಾರಣವಂತೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಅವರು ಪ್ರತಿದಿನ 2 ರಿಂದ 3 ಗಂಟೆಗಳ ಕಾಲ ಜಿಮ್ ನಲ್ಲಿ ಕೆಲಸ ಮಾಡುತ್ತಾರೆ. ಅವರು ವಾರದಲ್ಲಿ 6 ದಿನ ವರ್ಕೌಟ್ ಮಾಡುತ್ತಾರಂತೆ ಭಾನುವಾರದಂದು ವಿಶ್ರಾಂತಿ ಪಡೆಯುತ್ತಾರಂತೆ. ಅವರು ವಾರದ 3 ದಿನ ಲಿಫ್ಟಿಂಗ್ ಮತ್ತು 3 ದಿನ ಕಾರ್ಡಿಯೋ ಮಾಡುತ್ತಾರಂತೆ. ಇದರ ಜೊತೆಗೆ ಅವರು ಸೈಕ್ಲಿಂಗ್ ಇಷ್ಟಪಡುತ್ತಾರೆ. ಹಾಗೇ ಪುಷ್ ಅಪ್, ಪುಲ್ ಅಪ್ ಗಳು, ಜಪಿಂಗ್, ಸ್ಕೇಟ್ ಗಳನ್ನು ಮಾಡುತ್ತಾರಂತೆ.

ಹಾಗೇ ಅವರು ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸುತ್ತಾರಂತೆ. ಆಹಾರದಲ್ಲಿ ಮೊಟ್ಟೆ, ಮೀನು, ಮಾಂಸ, ಹಾಲು ಸೇವಿಸುತ್ತಾರಂತೆ, ಎಣ್ಣೆ ಮತ್ತು ಸಕ್ಕರೆ ಪದಾರ್ಥಗಳಿಂದ ದೂರವಿರುತ್ತಾರಂತೆ. 4 ಮೊಟ್ಟೆಗಳು ಮತ್ತು ಕೆನೆರಹಿತ ಹಾಲಿನಿಂದ ದಿನ ಪ್ರಾರಂಭಿಸುತ್ತಾರಂತೆ. ಸಾಮಾನ್ಯವಾಗಿ ಚಪಾತಿ , ತರಕಾರಿ ಸಲಾಡ್ ನ್ನು ಊಟಕ್ಕೆ ಸೇವಿಸುತ್ತಾರಂತೆ. ಹಾಗೇ ಮೀನು, ಚಿಕನ್ ತಿನ್ನುತ್ತಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...