alex Certify ದಂಗಾಗಿಸುತ್ತೆ ಶೋ ಟಾಪರ್ ಊರ್ವಶಿ ಧರಿಸಿದ್ದ ಡ್ರೆಸ್ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಶೋ ಟಾಪರ್ ಊರ್ವಶಿ ಧರಿಸಿದ್ದ ಡ್ರೆಸ್ ಬೆಲೆ

Urvashi Rautela Wears 37 Crore Rupee Dress, Video Viralಬಾಲಿವುಡ್ ನಟಿ ಊರ್ವಶಿ ರೌತೆಲಾರ ಅರಬ್ ಫ್ಯಾಶನ್ ವೀಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅರಬ್ ಫ್ಯಾಶನ್ ವೀಕ್ ನ ಶೋ ಸ್ಟಾಪರ್ ಆಗಿದ್ರು ಊರ್ವಶಿ. ಇದು ಹೆಮ್ಮೆ ವಿಷ್ಯ. ಏಕೆಂದ್ರೆ ಅರಬ್ ಫ್ಯಾಶನ್ ವೀಕ್‌ನಲ್ಲಿ ಶೋಸ್ಟಾಪರ್ ಆದ ಮೊದಲ ಭಾರತೀಯ ನಟಿ ಊರ್ವಶಿ.

ಊರ್ವಶಿ ಉತ್ತಮ ನಟಿ ಮಾತ್ರವಲ್ಲ ಫ್ಯಾಶನ್ ಐಕಾನ್ ಎಂಬುದು ಎಲ್ಲರಿಗೂ ಗೊತ್ತು. ಅರಬ್ ಫ್ಯಾಶನ್ ವೀಕ್ ನಲ್ಲಿ ಊರ್ವಶಿ ಅಭಿನಯದ ಶಾರ್ಟ್ ಫಿಲ್ಮ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಊರ್ವಶಿ ಈಜಿಫ್ಟ್ ರಾಣಿ ಕ್ಲಿಯೋಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ರಲ್ಲಿ ಅವ್ರು ಸುಂದರವಾಗಿ ಕಾಣ್ತಿದ್ದಾರೆ.

ಊರ್ವಶಿ ಚಿತ್ರಕ್ಕಾಗಿ ಧರಿಸಿದ ಉಡುಪಿನ ಬೆಲೆ ಕೇಳಿದ್ರೆ ದಂಗಾಗುತ್ತೆ. ಊರ್ವಶಿ ಧರಿಸಿದ್ದ ಬಟ್ಟೆಯನ್ನು ಚಿನ್ನದಿಂದ ಮಾಡಲಾಗಿದೆ. ಈ ಡ್ರೆಸ್ ಬೆಲೆ 37 ಕೋಟಿ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ. ಊರ್ವಶಿ ಸದಾ ಸುದ್ದಿಯಲ್ಲಿರುತ್ತಾರೆ. ಊರ್ವಶಿ ನೇಹಾ ಕಕ್ಕರ್ ಮದುವೆ ಸಂದರ್ಭದಲ್ಲಿ 55 ಲಕ್ಷ ಮೌಲ್ಯದ ಲೆಹಂಗಾ ಧರಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...