alex Certify ತಾವು ಆಡಿದ ಮಾತಿಗೆ ʼಕ್ಷಮೆʼ ಕೋರಿದ ನಯನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾವು ಆಡಿದ ಮಾತಿಗೆ ʼಕ್ಷಮೆʼ ಕೋರಿದ ನಯನ..!

ಕಾಮಿಡಿ ಕಿಲಾಡಿಗಳ ಮೂಲಕ ಫೇಮಸ್ ಆದ ನಟಿ ನಯನಾ ಇದೀಗ ವಿವಾದವೊದಕ್ಕೆ ಸಿಲುಕಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಈ ನಟಿ, ಇಂಗ್ಲಿಷ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರುಯಾಗಿದ್ದರು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡುವುದರ ಜೊತೆಗೆ ಕ್ಷಮೆ ಯಾಚಿಸಿದ್ದಾರೆ.

ಹೌದು, ಇವರ ಇಂಗ್ಲೀಷ್ ಪೋಸ್ಟ್‌ಗೆ ಕನ್ನಡಾಭಿಮಾನಿಯೊಬ್ಬ ಕಮೆಂಟ್ ಮಾಡಿದ್ದರು. ಹೀಗಾಗಿ ಆತನ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿದ್ದ ನಯನ ʼಅಪ್ಪಾ….ಕನ್ನಡದ ಭಕ್ತ. ಮುಚ್ಕೊಂಡು ನಿನ್ ಕೆಲಸ ನೋಡ್ಕೊʼ ಎಂದು ಹೇಳುವ ಮೂಲಕ ಅನೇಕರ ವಿರೋಧ ಕಟ್ಟಿಕೊಂಡಿದ್ದರು. ಅಷ್ಟೇ ಅಲ್ಲ ಇವರ ಈ ಮಾತಿಗೆ ಸ್ವತಃ ಜಗ್ಗೇಶ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ ನಯನ.

ತಾನು ಇಂಗ್ಲೀಷ್ ಭಾಷೆ ಬಳಸಿದ್ದ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ನಯನ, ಎಲ್ಲ ಅಪ್ಪಟ ಕನ್ನಡಾಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ಅಷ್ಟೆ ಅಲ್ಲ, ನಾನೂ ಕನ್ನಡ ಅಭಿಮಾನಿಯೇ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...