alex Certify ತಮ್ಮ ಕೂದಲಿನ ರಹಸ್ಯ ಬಿಚ್ಚಿಟ್ಟ ನಟಿ ಜಾಹ್ನವಿ ಕಪೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಕೂದಲಿನ ರಹಸ್ಯ ಬಿಚ್ಚಿಟ್ಟ ನಟಿ ಜಾಹ್ನವಿ ಕಪೂರ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಮಾರ್ಚ್ 6ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ವೇಳೆ ಅವರು ಅಭಿಮಾನಿಗಳಿಗೆ ತಮ್ಮ ಸುಂದರವಾದ ಕೂದಲಿನ ರಹಸ್ಯವನ್ನು ತಿಳಿಸಿದ್ದಾರೆ. ತಾವು ಕೂದಲಿಗೆ ಹೇಗೆ ಹೇರ್ ಮಾಸ್ಕ್ ತಯಾರಿಸುತ್ತಾರೆ ಎಂಬ ಕುರಿತಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಜಾಹ್ನವಿ ಕಪೂರ್ ತಮ್ಮ ಹೇರ್ ಮಾಸ್ಕ್ ತಯಾರಿಸಲು ಮೊಸರು, ಜೇನುತುಪ್ಪ, ತೆಂಗಿನ ಹಾಲು, ಮೊಟ್ಟೆಯನ್ನು ಬಳಸುತ್ತಾರೆ. ಮೊದಲಿಗೆ ಅವರು ಒಂದು ಪಾತ್ರೆಯಲ್ಲಿ 1 ಚಮಚ ಮೊಸರು, 1 ಚಮಚ ಜೇನುತುಪ್ಪ, 2 ಚಮಚ ತೆಂಗಿನ ಹಾಲು, 1 ಮೊಟ್ಟೆ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹೇರ್ ಮಾಸ್ಕ್ ತಯಾರಿಸಿಟ್ಟುಕೊಳ್ಳುತ್ತಾರೆ.

ʼಸುಂದರʼ ತ್ವಚೆಗೆ ಪಪ್ಪಾಯ ಫೇಸ್ ಪ್ಯಾಕ್

ಬಳಿಕ ಕೂದಲಿಗೆ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ಅನ್ನು ಕೂದಲಿಗೆ ಹಚ್ಚಿ ಬಳಿಕ ತಯಾರಿಸಿಟ್ಟ ಹೇರ್ ಮಾಸ್ಕ್ ಅನ್ನು ಹಚ್ಚುತ್ತಾರೆ. ಅದು ಒಣಗಿದ 20 ನಿಮಿಷ ಬಿಟ್ಟು ಶಾಂಪೂವಿನಿಂದ ಕೂದಲನ್ನು ವಾಶ್ ಮಾಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...