alex Certify ಚಾಲೆಂಜ್ ಸ್ವೀಕರಿಸಿ ಗಿಡ ನೆಟ್ಟ ರಶ್ಮಿಕಾ ಮಂದಣ್ಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲೆಂಜ್ ಸ್ವೀಕರಿಸಿ ಗಿಡ ನೆಟ್ಟ ರಶ್ಮಿಕಾ ಮಂದಣ್ಣ..!

ಸೆಲಿಬ್ರಿಟಿಗಳು ಚಾಲೆಂಜ್ ನೀಡುವುದು ಅದನ್ನು ಬೇರೆ ಸ್ಟಾರ್ಸ್‌ ಗಳು ಮುಂದುವರೆಸುವುದು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ಚಾಲೆಂಜ್‌ ‌ಅನ್ನು ಸೆಲಿಬ್ರಿಟಿಗಳು ಆರಂಭ ಮಾಡಿದ್ದಾರೆ. ಅದೇ ಗಿಡ ನೆಡುವ ಚಾಲೆಂಜ್.

ಹೌದು, ಗ್ರೀನ್ ಇಂಡಿಯಾ ಚಾಲೆಂಜ್ ಸದ್ಯ ಬಾರೀ ಸದ್ದು ಮಾಡುತ್ತಿದೆ. ಆಂಧ್ರ ರಾಜ್ಯಸಭಾ ಸದಸ್ಯ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಆರಂಭಿಸಿದ ಗ್ರೀನ್ ಇಂಡಿಯಾ ಚಾಲೆಂಜ್‌ಗೆ ಸೆಲಿಬ್ರಿಟಿಗಳು ಕೈ ಜೋಡಿಸಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಕೂಡ ಗಿಡ ನೆಟ್ಟಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಸೆಲಿಬ್ರಿಟಿಗಳು ಈ ಚಾಲೆಂಜ್ ಮುಗಿಸಿದ್ದಾರೆ.

ರಶ್ಮಿಕಾ ಮಂದಣ್ಣಗೆ ಸಮಂತಾ ಅಕ್ಕಿನೇನಿ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ರಶ್ಮಿಕಾ ತಮ್ಮ ಗಾರ್ಡನ್ ‌ನಲ್ಲಿ ಗಿಡ ನೆಟ್ಟಿದ್ದಾರೆ. ಇದರ ವಿಡಿಯೋ ಮಾಡಿರುವ ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಹಾಕಿಕೊಂಡಿದ್ದಾರೆ. ಹಾಗೆಯೇ, ರಶ್ಮಿಕಾ ಅವರ ಈ ಕೆಲಸಕ್ಕೆ ಸಂತೋಷ್ ಕುಮಾರ್ ಧನ್ಯವಾದ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ರಶ್ಮಿಕಾ, ಭಾರತವನ್ನು ಹಸಿರಾಗಿಡಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...