alex Certify ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ

ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಪುತ್ರನಿಗೆ ಸಂಕಷ್ಟ ಶುರುವಾಗಿದೆ. ಪುತ್ರ ಮಹಾಕ್ಷಯ್ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. ಮಿಥುನ್ ಚಕ್ರವರ್ತಿ ಪತ್ನಿ ವಿರುದ್ಧವೂ ದೂರು ದಾಖಲಿಸಲಾಗಿದೆ. ಅತ್ಯಾಚಾರ ಹಾಗೂ ಬಲವಂತ ಗರ್ಭಪಾತದ ದೂರು ದಾಖಲಾಗಿದೆ.

2015ರಲ್ಲಿ ಪೀಡಿತೆ ಮಹಾಕ್ಷಯ್ ಜೊತೆ ಲಿವ್ ಇನ್ ನಲ್ಲಿದ್ದಳಂತೆ. ಕೋಲ್ಡ್ ಡ್ರಿಂಕ್ ಗೆ ನಶೆ ಪದಾರ್ಥ ನೀಡಿ ಪ್ರಜ್ಞೆ ತಪ್ಪಿಸಿದ್ದ ಮಹಾಕ್ಷಯ್ ಅತ್ಯಾಚಾರವೆಸಗಿದ್ದನಂತೆ. ನಂತ್ರ ಮದುವೆ ಆಸೆ ತೋರಿಸಿ ಅನೇಕ ಬಾರಿ ಅತ್ಯಾಚಾರವೆಸಗಿದ್ದನಂತೆ. ಪೀಡಿತೆ ಗರ್ಭಿಣಿಯಾದ ವಿಷ್ಯ ಗೊತ್ತಾಗ್ತಿದ್ದಂತೆ ಬಲವಂತವಾಗಿ ಗರ್ಭಪಾತ ಮಾಡಿಸಲು ಮುಂದಾಗಿದ್ದನಂತೆ. ಇದಕ್ಕೆ ಪೀಡಿತೆ ವಿರೋಧ ವ್ಯಕ್ತಪಡಿಸಿದ ನಂತ್ರ ತಿಳಿಯದೆ ಮಾತ್ರೆ ನೀಡಿದ್ದನಂತೆ.

ವಿಷ್ಯ ಮುಚ್ಚಿಡುವಂತೆ ಮಹಾಕ್ಷಯ್ ತಾಯಿ ಬೆದರಿಕೆ ಹಾಕಿದ್ದರಂತೆ. ಈ ಬಗ್ಗೆಯೂ ಪೀಡಿತೆ ದೂರಿನಲ್ಲಿ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮಹಾಕ್ಷಯ್ ಗೆ ಈಗಾಗಲೇ ಮದುವೆಯಾಗಿದೆ. ಮಹಾಕ್ಷಯ್ ಬಾಲ್ಯದ ಗೆಳತಿಯನ್ನು ಜುಲೈ 7,2018ರಲ್ಲಿ ಮದುವೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...