alex Certify ಕೊಲಂಬೊ ಕ್ಯಾಸಿನೋ ಪಾರ್ಟಿ ಬಗ್ಗೆ ನಟಿ ಐಂದ್ರಿತಾ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲಂಬೊ ಕ್ಯಾಸಿನೋ ಪಾರ್ಟಿ ಬಗ್ಗೆ ನಟಿ ಐಂದ್ರಿತಾ ಹೇಳಿದ್ದೇನು…?

ಬೆಂಗಳೂರು: ಶೇಖ್ ಫಾಝಿಲ್ ಜತೆ ನನಗೆ ಯಾವುದೇ ವೈಯಕ್ತಿಕ ಪರಿಚಯವಿಲ್ಲ. ಸಿನಿಮಾ ಪ್ರಮೋಷನ್ ಗಾಗಿ ನಾನು ಕೊಲಂಬೊದ ಕ್ಯಾಸಿನೋಗೆ ಹೋಗಿದ್ದೆ ಎಂದು ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್ ಆಯೋಜಿಸುತ್ತಿದ್ದ ಕ್ಯಾಸಿನೋ ಪಾರ್ಟಿಯಲ್ಲಿ ಐಂದ್ರಿತಾ ರೇ ಕೂಡ ಭಾಗವಹಿಸುತ್ತಿದ್ದರು ಹಾಗೂ ಫಾಝಿಲ್ ಪಾರ್ಟಿಗೆ ಬನ್ನಿ ಎಂದು ಆಹ್ವಾನ ನೀಡುವ ವಿಡಿಯೋ ಬಹಿರಂಗವಾಗಿತ್ತು. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಐಂದ್ರಿತಾ, ’’ಮೇ ಜರೂರ್ ಆವೂಂಗ” ಎಂಬ ತಮ್ಮ ಹಿಂದಿ ಚಿತ್ರದ ಪ್ರಮೋಷನ್ ಗಾಗಿ ಕೊಲಂಬೊ ಕ್ಯಾಸಿನೋಗೆ ಚಿತ್ರತಂಡದ ಜತೆ ಹೋಗಿದ್ದೆ ನನಗೆ ಫಾಝಿಲ್ ಎಂಬ ವ್ಯಕ್ತಿ ವೈಯಕ್ತಿಕವಾಗಿ ಪರಿಚಯವಿಲ್ಲ ಎಂದು ಹೇಳಿದ್ದಾರೆ.

ಇನ್ನು ನಟ ಅರ್ಬಾಜ್ ಖಾನ್ ಅವರ ಹುಟ್ಟುಹಬ್ಬದಂದು ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿ ನಡೆದಿತ್ತು. ಈ ವೇಳೆ ಫಾಝಿಲ್ ಎಂಬುವವರು ಬಂದಿದ್ದರು. ಪಾರ್ಟಿಯಲ್ಲಿ ಸಹಜವಾಗಿ ಎಲ್ಲರೂ ಸೇರಿ ಫೋಟೊ ತೆಗೆಸಿಕೊಂಡಿದ್ದೆವು. ಅದರಲ್ಲಿ ಫಾಝಿಲ್ ಕೂಡ ಇದ್ದ. ಈ ಫೋಟೋಗಳು ನನ್ನ ಬಳಿಯೂ ಇದೆ. ಈ ಪಾರ್ಟಿಗೆ ಮಾಧ್ಯಮದವರು ಬಂದಿದ್ದರು. ನಮಗೆ ಯಾರಿಗೂ ಫಾಝಿಲ್ ಬಗ್ಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ಪಾರ್ಟಿಯ ವೇಳೆ ಫೋಟೊ ತೆಗೆಯುವಾಗ ಪ್ರತಿಯೊಬ್ಬರ ಹಿನ್ನಲೆ ತಿಳಿದುಕೊಳ್ಳಲು ಆಗುವುದಿಲ್ಲ. ನಮ್ಮ ಜತೆ ಫೋಟೋ ತೆಗೆಸಿಕೊಂಡ ವ್ಯಕ್ತಿ ತಪ್ಪು ಮಾಡಿದ್ದರೆ ನಮ್ಮ ತಪ್ಪು ಏನಿದೆ..? ಈ ಬಗ್ಗೆ ನಮ್ಮನ್ನು ಪ್ರಶ್ನೆ ಮಾಡುವುದು ತಪ್ಪು ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...