alex Certify ಕೊರೊನಾ ಕಾರಣ ನೀಡಿ ಅಭಿಮಾನಿಯ ಆಸೆಗೆ ತಣ್ಣೀರೆರಚಿದ ನಟಿ ಜಾನ್ವಿ ಕಪೂರ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾರಣ ನೀಡಿ ಅಭಿಮಾನಿಯ ಆಸೆಗೆ ತಣ್ಣೀರೆರಚಿದ ನಟಿ ಜಾನ್ವಿ ಕಪೂರ್..​..!

ಬಾಲಿವುಡ್​ ನಟಿ ಜಾನ್ವಿ ಕಪೂರ್​ ಸದ್ಯ ಸಿನಿಮಾ ಶೂಟಿಂಗ್​​ಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್​​ನ ನಡುವೆಯೂ ನಟಿ ಅಭಿಮಾನಿಗಳಿಗಾಗಿ ಸಮಯವನ್ನ ಮೀಸಲಿರಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ನಟಿ ಅಭಿಮಾನಿಗಳಿಗೆ ಏನನ್ನಾದರೂ ಪ್ರಶ್ನೆ ಕೇಳಿ ಎಂದು ಹೇಳಿದ್ದರು.

ಈ ವೇಳೆ ಅಭಿಮಾನಿಯೊಬ್ಬ ನಾವಿಬ್ಬರು ಕಿಸ್​ ಮಾಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಮಾಸ್ಕ್​ ಹಾಕಿಕೊಂಡ ತಮ್ಮ ಫೋಟೋದ ಜೊತೆಗೆ ನೋ ಎಂದು ಜಾನ್ವಿ ಉತ್ತರ ನೀಡಿದ್ದಾರೆ. ಇದು ಮಾತ್ರವಲ್ಲದೇ ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಜಾನ್ವಿ ತಾಳ್ಮೆಯಿಂದ ಉತ್ತರ ನೀಡಿದ್ದಾರೆ.

ಇಂದು ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್’ ವಿಡಿಯೋ ಸಾಂಗ್ ರಿಲೀಸ್

ಮತ್ತೊಬ್ಬ ಅಭಿಮಾನಿ ಜಾನ್ವಿಯ ಡಯಟ್​ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೈಯಲ್ಲಿ ಐಸ್​ಕ್ರೀಂ ಹಿಡಿದ ಫೋಟೋ ಶೇರ್​ ಮಾಡಿದ ನಟಿ ದಿನಕ್ಕೆ ನಾಲ್ಕು ಸ್ಕೂಪ್​ ಎಂದು ಫನ್ನಿಯಾಗಿ ಉತ್ತರ ನೀಡಿದ್ದಾರೆ.

ನಟಿ ಜಾನ್ವಿ ಕಪೂರ್​ ತಮ್ಮ ಮುಂದಿನ ಚಿತ್ರ ಗುಡ್​ ಲಕ್​ ಜೆರ್ರಿ ಸಿನಿಮಾದ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾ ಆನಂದ್​ ಎಲ್​ ರೈ ನಿರ್ಮಾಣ ಮಾಡಿದ್ರೆ, ಸಿದ್ಧಾರ್ಥ್​ ಸೇನ್​ಗುಪ್ತಾ ನಿರ್ದೇಶನ ಮಾಡಿದ್ದಾರೆ. ಸಿನಿಮಾಗೆ ಪಂಕಜ್​ ಮತ್ತಾ ಕಥೆಯನ್ನ ಹೆಣೆದಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...